NCC ಟ್ರೈನಿಂಗ್​ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಮನಬಂದಂತೆ ಥಳಿಸಿದ ಸೀನಿಯರ್ಸ್​; ವಿಡಿಯೋ ವೈರಲ್

Clg Ragging
Published on

ಅಮರಾವತಿ: ಎನ್​ಸಿಸಿ ಟ್ರೈನಿಂಗ್​ ಹೆಸರಿನಲ್ಲಿ ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳು ಜೂನಿಯರ್​ಗಳನ್ನು ಮನಬಂದಂತೆ ಥಳಿಸಿ ರ್‍ಯಾಗ್​ ಮಾಡಿರುವ ಘಟನೆ ಆಂಧ್ರಪ್ರದೇಶದ ಪಾಲ್ನಾಡುನಲ್ಲಿರುವ ಖಾಸಗಿ ಕಾಲೇಜಿನಲ್ಲಿ ನಡೆದಿದೆ. ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಆಂಧ್ರಪ್ರದೇಶದ ಪಾಲ್ನಾಡ್​ನ ನರಸರಾವ್‌ಪೇಟೆಯಲ್ಲಿರುವ ಎಸ್​ಎಸ್​ಎನ್​ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಕಾಲೇಜಿನ ಸೀನಿಯರ್​ ವಿದ್ಯಾರ್ಥಿಗಳು ಎನ್​ಸಿಸಿ ಟ್ರೈನಿಂಗ್​ ಹೆಸರಿನಲ್ಲಿ ಜೂನಿಯರ್​ಗಳನ್ನು ಹಾಸ್ಟೆಲಿಗೆ ಕರೆದುಕೊಂಡು ಬಂದು ಮನದಂಬಂತೆ ಥಳಿಸುತ್ತಾರೆ. ವಿದ್ಯಾರ್ಥಿಗಳನ್ನು ಜೋರಾಗಿ ನಗುತ್ತಾ ಥಳಿಸುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋವನ್ನು ವೈಎಸ್​ಆರ್​ ಕಾಂಗ್ರೆಸ್​ ಪಕ್ಷ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಈ ಘಟನೆಯು ಫೆಬ್ರವರಿಯಲ್ಲಿ ನಡೆದಿದ್ದು, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯು ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದೆ. ಈ ಘಟನೆ ನಿಮ್ಮ ಸರ್ಕಾರ ಆಡಳಿತದಲ್ಲಿದ್ದಾಗ ನಡೆದಿದ್ದು ಎಂದು ಟಿಡಿಪಿ ವೈಎಸ್​ಆರ್​ಗೆ ಟಾಂಗ್​ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net