

ತೆಲಂಗಾಣ: ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ನನಗೆ ಇಷ್ಟವಾದ ನಿರ್ದೇಶಕರಲ್ಲಿ ಒಬ್ಬರು ಆದರೆ ಅವರ ಮೇಲೆ ನನಗೆ ಕೋಪವಿದೆ ಎಂದು ಪ್ರಶಾಂತ್ ವರ್ಮಾ ಹೇಳಿದ್ದಾರೆ.
ನನಗೆ ರಾಜಮೌಳಿ ಅವರ ಮೇಕಿಂಗ್ ಶೈಲಿ ಇಷ್ಟ. ನಾನು ಇಂಜಿನಿಯರಿಂಗ್ ಓದುತ್ತಿದ್ದಾಗ ನಾನು ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಲು ಹಲವು ಬಾರಿ ಪ್ರಯತ್ನ ಮಾಡಿದ್ದೆ, ಅವಕಾಶಕ್ಕಾಗಿ ಮೇಲ್ಗಳನ್ನು ಕಳುಹಿಸಿದೆ. ಅವರು ನನ್ನ ವಿನಂತಿಯನ್ನು ನಯವಾಗಿ ತಿರಸ್ಕರಿಸಿದರು. ಅವರು ಯಾವುದೇ ಹುದ್ದೆ ಖಾಲಿ ಇಲ್ಲ ಎಂದು ಹೇಳಿದ್ದರು.
ನನಗೆ ಕಠಿಣ ಪರಿಶ್ರಮ ಮತ್ತು ಪ್ರತಿಭೆ ಇದ್ದರೂ ನಿರ್ದೇಶಕ ರಾಮಮೌಳಿ ಅವರ ತಂಡ ನನ್ನನ್ನು ಕೆಲಸಕ್ಕೆ ತೆಗೆದುಕೊಳ್ಳಲಿಲ್ಲ ಇದರಿಂದ ನನಗೆ ಅವರ ಮೇಲೆ ಕೋಪ ಬಂದಿತ್ತು. ಆ ಸಮಯದಲ್ಲಿ ಏಕಲವ್ಯ ಅವರನ್ನು ನೆನಪಿಸಿಕೊಂಡು ರಾಜಮೌಳಿ ಅವರ ಚಿತ್ರಗಳನ್ನು ಮೇಕಿಂಗ್ ವಿಡಿಯೋಗಳನ್ನು ನೋಡುವುದರ ಮೂಲಕ ನಾನು ಅನೇಕ ವಿಷಯಗಳನ್ನು ಕಲಿತಿದ್ದೇನೆ ಎಂದು ನೆನಪಿಸಿಕೊಂಡರು.
ದೊಡ್ಡ ಹೀರೋಗಳ ಜೊತೆ ಕೆಲಸ ಮಾಡುವುದಕ್ಕೆ ನನ್ನ ವಿರೋಧವಿಲ್ಲ, ಅವರ ಜೊತೆಗಿನ ಚಿತ್ರಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ. ಅವರಿಗಾಗಿ ಕಾದು ಸಮಯ ಹಾಳು ಮಾಡುವ ಸಂದರ್ಭಗಳು ಬರುತ್ತವೆ. ಆ ನಂತರ ಡೆಡ್ಲೈನ್ನಲ್ಲಿ ಕೆಲಸ ಮಾಡುತ್ತಿದ್ದೇನೆ, ಟಾಮ್ ಕ್ರೂಸ್ ಬಂದರೆ ನಾನು ಮಾಡುತ್ತೇನೆ ಎಂದ ಪ್ರಶಾಂತ್ ಹೇಳಿದರು.
ನಿರ್ದೇಶಕ ಪ್ರಶಾಂತ್ ವರ್ಮಾ ಆ್ಯಕ್ಷನ್ ಕಟ್ ಹೇಳಿದ ‘ಹನುಮಾನ್’ ಸಿನಿಮಾ ಯಶಸ್ಸು ಕಂಡಿತು. ತೇಜ ಸಜ್ಜಾ ನಟನೆಯ ಈ ಸಿನಿಮಾ 250 ಕೋಟಿ ರೂಪಾಯಿ ಗಳಿಕೆ ಮಾಡಿ ಬೀಗಿದೆ. ಯುವ ನಟ ತೇಜ ಸಜ್ಜಾ ನಾಯಕ ನಟನಾಗಿ ನಟಿಸಿದ್ದಾರೆ. ಈ ವರ್ಷ ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸಿನಿಮಾ ತೆರೆಕಂಡಿತು.
ಭಾರತ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲೂ ‘ಹನುಮಾನ್’ ಚಿತ್ರ ಬಿಡುಗಡೆ ಆಯಿತು. ಜನವರಿ 12ರಂದು ರಿಲೀಸ್ ಆದ ಈ ಸಿನಿಮಾ 14 ದಿನಕ್ಕೆ ವಿಶ್ವ ಬಾಕ್ಸ್ ಆಫೀಸ್ನಲ್ಲಿ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.