More

    ಜೆಡಿಯು-ಬಿಜೆಪಿ ಮೈತ್ರಿ ಹೆಚ್ಚು ದಿನ ಉಳಿಯಲ್ಲ: ಪ್ರಶಾಂತ್ ಕಿಶೋರ್

    ನವದೆಹಲಿ: ಬಿಜೆಪಿ ಜೊತೆ ಸೇರಿ ಬಿಹಾರದ ಮುಖ್ಯಮಂತ್ರಿಯಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು 9ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದರು. ಈ ಕುರಿತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ:ಕುಸಿದ ತಾಪಮಾನ!: ‘ಊಟಿ’ ಚಳಿಗೆ ಗಢಗಢ ನಡುಗುತ್ತಿರುವ ಜನ

    ಬಿಹಾರದ ಬಿಜೆಪಿ ಮತ್ತು ಇತರ ಜೆಡಿಯು ನಾಯಕರು ಕೂಡ ‘ಪಲ್ಟುಮಾರ್’ ಆಗಿದ್ದಾರೆ. ಮುಖ್ಯಮಂತ್ರಿ ನಿತೀಶ್​ ಕುಮಾರ್​ ವಿರುದ್ಧ ಹಲವು ಆರೋಪ ಮಾಡುತ್ತಿದ್ದ ಬಿಜೆಪಿ ನಾಯಕರೇ ಇಂದು ಸ್ವಾಗತ ಮಾಡುತ್ತಿರುವುದು ನೋವಿನ ಸಂಗತಿ ಎಂದಿದ್ದಾರೆ.

    ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿರು ಅವರು, ಬಿಹಾರದಲ್ಲಿ ಜೆಡಿಯು-ಬಿಜೆಪಿ ಜೊತೆ ಮಾಡಿಕೊಂಡಿರುವ ಮೈತ್ರಿ ಹೆಚ್ಚು ದಿನ ಉಳಿಯುವ ಸಾಧ್ಯತೆ ಇಲ್ಲ. ಈ ಸರ್ಕಾರದ ಆಯುಷ್ಯ ಕೆಲವೇ ತಿಂಗಳುಗಳು. ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆವರೆಗೂ ನಿಲ್ಲುವ ಸಾಧ್ಯತೆ ಕಡಿಮೆ. ಸಾರ್ವತ್ರಿಕ ಚುನಾವಣೆ ಮುಗಿದ ಆರು ತಿಂಗಳೊಳಗೆ ಈ ಬದಲಾವಣೆ ಕಾಣಲಿದೆ. ಈ ವಿಷಯವನ್ನು ಲಿಖಿತವಾಗಿ ಸಾಬೀತು ಮಾಡುತ್ತೇನೆ ಎಂದು ಭವಿಷ್ಯ ನುಡಿದರು.

    2022ರಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದ ನಿತೀಶ್ ಕುಮಾರ್ ಆರ್‌ಜೆಡಿ ಜತೆಗೂಡಿ ಸರ್ಕಾರ ರಚಿಸಿದ್ದರು. ಇದೇ ರೀತಿ ಮುಂದುವರಿದರೆ ಲೋಕಸಭೆ ಚುನಾವಣೆಯಲ್ಲಿ 5 ಸ್ಥಾನ ಗೆಲ್ಲುವುದು ಕಷ್ಟ ಎಂದು ಪ್ರಶಾಂತ್ ಕಿಶೋರ್ ನೆನಪಿಸಿದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸತೀಶ್​ ಯಾವುದೇ ಪಕ್ಷದೊಂದಿಗೆ ಸ್ಪರ್ಧಿಸಿದರೂ 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂದರು. ಅದಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಚಾಲೆಂಜ್​ ಹಾಕಿದರು.

    ಭಾನುವಾರ (ಇಂದು) ಸಂಜೆ 5 ಗಂಟೆಗೆ ಜೆಡಿಯು-ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಿದೆ. ಮುಖ್ಯಮಂತ್ರಿಯಾಗಿ ನಿತೀಶ್ ಜೊತೆಗೆ ಆರು ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ ಮೂವರು ಬಿಜೆಪಿ ಹಾಗೂ ಉಳಿದವರು ಜೆಡಿಯು ಪಕ್ಷದವರು. 2015ರ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಗೆಲುವಿಗೆ ಪಾತ್ರ ವಹಿಸಿದ್ದ ಪ್ರಶಾಂತ್​ ಕಿಶೋರ್​ ಇದೀಗ ಅವರನ್ನೇ ‘ಪಲ್ಟುಮಾರ್’​ ಎಂದು ಟೀಕೆ ಮಾಡಿದ್ದಾರೆ.

    ಕಾಲೇಜು ಹಾಸ್ಟೆಲ್​ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ ಮೃತ್ಯು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts