More

  ‘ಲಖೀಂಪುರ್​ ಆಧಾರದಲ್ಲಿ ವಿರೋಧ ಪಕ್ಷಗಳ ಪುನಶ್ಚೇತನ ಯತ್ನಕ್ಕೆ ನಿರಾಶೆ ಕಾದಿದೆ’ ಎಂದ ಪ್ರಶಾಂತ್​ ಕಿಶೋರ್!

  ನವದೆಹಲಿ: ಲಖೀಂಪುರ್​ ಖೇರಿ ಘಟನೆಯ ಆಧಾರದ ಮೇಲೆ ಕಾಂಗ್ರೆಸ್​ ನೇತೃತ್ವದ ವಿರೋಧ ಪಕ್ಷವನ್ನು ಪುನಶ್ಚೇತನ ಮಾಡಲು ಬಯಸುತ್ತಿರುವ ಜನರಿಗೆ ದೊಡ್ಡ ನಿರಾಶೆ ಕಾದಿದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್​ ಕಿಶೋರ್ ಹೇಳಿದ್ದಾರೆ. ಕಾಂಗ್ರೆಸ್​ ನಾಯಕರಾದ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ಲಖೀಂಪುರ್​ ಘಟನೆಯ ಸಂತ್ರಸ್ತರ ಕುಟುಂಬಗಳಿಗೆ ಭೇಟಿ ನೀಡಿದ ನಂತರ, ಕಿಶೋರ್​, ಈ ಮಾತು ಹೇಳಿದ್ದಾರೆ.​

  ದೇಶದ ಚುಕ್ಕಾಣಿ ಹಿಡಿದಿರುವ ಬಿಜೆಪಿ ವಿರುದ್ಧ ಚುನಾವಣೆ ಎದುರಿಸಲು ಕಾಂಗ್ರೆಸ್​ ಮತ್ತು ಇತರ ವಿರೋಧ ಪಕ್ಷಗಳು ಪ್ರಯತ್ನ ನಡೆಸುತ್ತಲೇ ಇವೆ. ಈ ನಿಟ್ಟಿನಲ್ಲಿ ಉತ್ತರಪ್ರದೇಶದ ಲಖೀಂಪುರ್​ ದುರಂತವು ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ವಿರುದ್ಧ ಮಾತನಾಡಲು ಅವಕಾಶ ಮಾಡಿಕೊಟ್ಟಿದೆ. ಇದೇ ಹಿನ್ನೆಲೆಯಲ್ಲಿ ರಾಜಕೀಯ ಬೆಳವಣಿಗೆಗಳನ್ನು ಚುನಾವಣಾ ದೃಷ್ಟಿಕೋನದಿಂದ ಅಳೆಯಬಲ್ಲ ಪ್ರಶಾಂತ್​ ಕಿಶೋರ್​ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ತಮ್ಮ ಟ್ವೀಟ್​ನಲ್ಲಿ ಜಿಒಪಿ ಅರ್ಥಾತ್ ‘ಗ್ರ್ಯಾಂಡ್​ ಓಲ್ಡ್​ ಪಾರ್ಟಿ’ ಅಥವಾ ‘ಗವರ್ನಮೆಂಟ್​ ಆಫ್ ಪಂಜಾಬ್​’ ಎಂದು ಕಾಂಗ್ರೆಸ್​ನತ್ತ ಬೆಟ್ಟು ಮಾಡಿರುವ ಕಿಶೋರ್​, “ಲಖೀಂಪುರ್​ ಖೇರಿ ಘಟನೆಯ ಆಧಾರದ ಮೇಲೆ ಜಿಒಪಿ ನೇತೃತ್ವದ ವಿರೋಧದ ತ್ವರಿತ ಮತ್ತು ದಿಢೀರ್​ ಪುನರುಜ್ಜೀವನವನ್ನು ಹುಡುಕುತ್ತಿರುವ ಜನರು ದೊಡ್ಡ ನಿರಾಶೆಗೆ ಮೈಒಡ್ಡುತ್ತಿದ್ದಾರೆ. ದುರದೃಷ್ಟವಶಾತ್ ಆಳವಾಗಿ ಬೇರೂರಿರುವ ಸಮಸ್ಯೆಗಳಿಗೆ ಮತ್ತು ಜಿಒಪಿಯ ರಚನಾತ್ಮಕ ದೌರ್ಬಲ್ಯಕ್ಕೆ ಯಾವುದೇ ತ್ವರಿತ ಪರಿಹಾರಗಳಿಲ್ಲ” ಎಂದು ಬರೆದಿದ್ದಾರೆ. (ಏಜೆನ್ಸೀಸ್)

  ಶಾರುಖ್ ಪುತ್ರನ ಜಾಮೀನು ಅರ್ಜಿ ವಜಾ; ನ್ಯಾಯಾಲಯದಲ್ಲಿ ನಡೆದದ್ದೇನು?

  ‘ಐಟಿ ದಾಳಿ… ಇವತ್ತು ಇವರ ಮೇಲೆ ನಾಳೆ ಅವರ ಮೇಲೆ’ ಎಂದ ಶ್ರೀರಾಮುಲು

  ಮೇಡ್​ ಇನ್​ ಚೈನಾ ಕಾರನ್ನು ಭಾರತದಲ್ಲಿ ಮಾರಬೇಡಿ ಅಂತ ಟೆಸ್ಲಾಗೆ ಹೇಳಿದೀನಿ – ಸಾರಿಗೆ ಸಚಿವ ನಿತಿನ್ ಗಡ್ಕರಿ

  See also  ಚೆನ್ನಮ್ಮ ವಿಜಯೋತ್ಸವಕ್ಕೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts