

ಕಡಬ: ಅಕ್ರಮ ಕಸಾಯಿಖಾನೆ, ಗೋ ಸಾಗಾಟ ನಿಲ್ಲಿಸದಿದ್ದರೆ ಹಿಂದು ಸಂಘಟನೆಯ ಕಾರ್ಯಕರ್ತರು ಜೀವ ಪಣಕ್ಕಿಟ್ಟಾದರೂ ಗೋ ರಕ್ಷಣೆ ಮಾಡುತ್ತೇವೆ ಎಂದು ವಿಶ್ವ ಹಿಂದು ಪರಿಷತ್ನ ವಿಭಾಗ ಪ್ರಚಾರ ಪ್ರಸಾರ ಪ್ರಮುಖ್ ಪ್ರದೀಪ್ ಸರಿಪಳ್ಳ ಹೇಳಿದ್ದಾರೆ.
ಕಡಬ ಠಾಣಾ ವ್ಯಾಪ್ತಿಯ ಕೊಲದಲ್ಲಿ ಎರಡು ದಿನಗಳ ಹಿಂದೆ ವಾಹನವೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋ ಅಕ್ರಮ ಸಾಗಾಟ ಹಾಗೂ ಇದರಲ್ಲಿ 3 ಜಾನುವಾರು ಅಸುನೀಗಿದ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಕಡಬ ಪ್ರಖಂಡ ವಿ.ಹಿಂ.ಪ. ನೇತೃತ್ವದಲ್ಲಿ ಕಡಬ ಠಾಣೆಯ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ತಾ.ಪಂ. ವಾಜಿ ಅಧ್ಯಕ್ಷೆ ಪುಲಸ್ತ್ಯ ರೈ ಮಾತನಾಡಿದರು. ವಿ.ಹಿಂ.ಪ. ಉಪಾಧ್ಯಕ್ಷ ಸುದರ್ಶನ ಶಿರಾಡಿ, ಗೌರವಾಧ್ಯಕ್ಷ ವಾಸುದೇವ ಭಟ್ ಕಡ್ಯ, ಜತೆಕಾರ್ಯದರ್ಶಿ ಪ್ರಮೀಳಾ ಲೋಕೇಶ್, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಶ್ರೀಕೃಷ್ಣ ಎಂ.ಆರ್., ವಾತೃಶಕ್ತಿಯ ಜಿಲ್ಲಾ ಪ್ರಮುಖ್ ಗೀತಾ ಅಮೈ ಕೇವಳ, ಕಿಸಾನ್ ಸಂ ಕಡಬ ತಾಲೂಕು ಅಧ್ಯಕ್ಷ ಮನೋಹರ್ ರೈ ಅಲಿವಾರ್ ಪಟ್ಟೆ, ಪ್ರಮುಖರಾದ ಪ್ರಮೋದ್ ರೈ ನಂದುಗುರಿ, ಉಮೇಶ್ ಆಚಾರ್ಯ, ವಾಸುದೇವ ಗೌಡ ಕೊಲ್ಲೆಸಾಗು, ಸತ್ಯನಾರಾಯಣ ಹೆಗ್ಡೆ, ವೀಣಾ ಕೊಲ್ಲೆಸಾಗು, ಜಯಚಂದ್ರ ರೈ ಕುಂಟೋಡಿ, ಸುರೇಶ್ ದೆಂತಾರು, ಮುತ್ತುಕುವಾರ್, ಸೀತಾರಾಮ ಗುರುಕೃಪಾ ಮೊದಲಾದವರಿದ್ದರು. ಬಜರಂಗದಳದ ಅಶ್ವಿತ್ ಕಂಡಿಗ ಸ್ವಾಗತಿಸಿದರು. ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೊಲ್ಪೆ ವಂದಿಸಿದರು. ಪ್ರತಿಭಟನೆಯ ಬಳಿಕ ಒಂದೆರಡು ನಿಮಿಷಗಳ ಕಾಲ ರಾಜ್ಯ ರಸ್ತೆತಡೆ ಮಾಡಲಾಯಿತು. ಬಳಿಕ ಕಡಬ ಠಾಣೆಯ ಮೂಲಕ ಮನವಿ ಸಲ್ಲಿಸಲಾಯಿತು.