ಟೋಲ್​ ವಿಚಾರಕ್ಕೆ ಆರಂಭವಾದ ಜಗಳ; ಸಿಟ್ಟಿನಲ್ಲಿ ಹಾಕಿ ಸ್ಟಿಕ್​ನಿಂದ ಯುವಕನ ಜೀವ ತೆಗೆದ ದುಷ್ಕರ್ಮಿಗಳು

Crime News
Published on

ಬಿಡದಿ: ಟೋಲ್ ಪಡೆಯುವ ವಿಚಾರಕ್ಕೆ ಆರಂಭವಾದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ. ತಾವರೆಕೆರೆ ಸಿಕ್ಕೆಪಾಳ್ಯ ನಿವಾಸಿ ಪವನ್ ನಾಯಕ್(26) ಮೃತ ದುರ್ದೈವಿ. ಹತ್ಯೆಗೀಡಾದ ಪವನ್ ರಾಮನಗರ ‌ತಾಲೂಕಿನ ಶೇಷಗಿರಿಹಳ್ಳಿ‌ ಟೋಲ್ ಪ್ಲಾಜಾದಲ್ಲಿ ಕೆಲಸ ಮಾಡುತ್ತಿದ್ದ.

ಬೆಂಗಳೂರು ಮೂಲದ ಯುವಕರ ಗುಂಪು ಹಣದ ವಿಚಾರವಾಗಿ ಟೋಲ್​ನಲ್ಲಿ ಕೆಲಸ ಮಾಡುತ್ತಿದ್ದ ಪವನ್ ನಾಯಕ್ ಜತೆಗೆ ನಿನ್ನೆ ರಾತ್ರಿ ಗಲಾಟೆ ಮಾಡಿದ್ದಾರೆ. ಈ ವೇಳೆ ಸಿಬ್ಬಂದಿ ಹಾಗೂ ಕಾರಿನಲ್ಲಿ ಬಂದಿದ್ದ ಯುವಕರ ನಡುವೆ ಹೊಡೆದಾಡ ನಡೆದಿದೆ. ಇದನ್ನೇ ಗುರಿಯಾಗಿಸಿಕೊಂಡ ಯುವಕರು ಕೆಲಸ ಮುಗಿಸಿ ಊಟಕ್ಕೆ ಹೋಗಿದ್ದಾಗ ಪವನ್​ಗೆ ಹಾಕಿ ಸ್ಟಿಕ್​ನಿಂದ ಹೊಡೆದು ಕೊಲೆ ಮಾಡಿದ್ದಾರೆ.

ನಿನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ಗಲಾಟೆ ನಡೆದಿದ್ದು, 12 ಗಂಟೆಗೆ ವೇಳೆಗೆ ಯುವಕರ ಗುಂಪು ಹೆಜ್ಜಲ ಸಮೀಪ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಬಂದು ಪರೀಶಿಲಿಸಿದ್ದಾರೆ. ಮೃತ ದೇಹವನ್ನು ಬೆಂಗಳೂರು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇದೀಗ ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net