

ಬೆಂಗಳೂರು: ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (Bigg Boss) ಆರಂಭವಾಗಿ 50ಕ್ಕೂ ಅಧಿಕ ದಿನಗಳು ಕಳೆದಿದ್ದು, ಒಂದಿಲ್ಲೊಂದು ಕಾರಣಕ್ಕೆ ಪ್ರೇಕ್ಷಕರ ಗಮನವನ್ನು ಸೆಳೆಯುವಲ್ಲಿ ಕಾರ್ಯಕ್ರಮ ಯಶಸ್ವಿಯಾಗಿದೆ. ಎಂಟನೇ ವಾರದ ಟಾಸ್ಕ್ ನಿಮಿತ್ತ ಬಿಗ್ಬಾಸ್ ಮನೆ ಸಾಮ್ರಾಜ್ಯವಾಗಿ (Kingdom) ಪರಿವರ್ತನೆಗೊಂಡಿದ್ದು, ಮನೆಯ ಕ್ಯಾಪ್ಟನ್ ಮಂಜು (Manju) ರಾಜನಾಗಿ ಆಳ್ವಿಕೆ ನಡೆಸುತ್ತಿದ್ದರೆ. ಯುವರಾಣಿಯಾಗಿ ಮೋಕ್ಷಿತಾ ಪಟ್ಟ ಏರುವುದಕ್ಕಾಗಿ ಕಸರತ್ತು ನಡೆಸುತ್ತಿದ್ದಾರೆ.
ಬಿಗ್ಬಾಸ್ ಸಾಮ್ರಾಜ್ಯದಲ್ಲಿ (Bigg Boss Kingdom) ಮನೆಯ ಕ್ಯಾಪ್ಟನ್ ಮಂಜು ರಾಜನಾಗಿ ಆಳ್ವಿಕೆ ನಡೆಸುತ್ತಿದ್ದು, ಯುವರಾಣಿ ಆಗಮನದ ಬಳಿಕ ಮನೆ ಎರಡು ಬಣಗಳಾಗಿ ವಿಭಜನೆಯಾಗಿದೆ. ನಿನ್ನೆಯ (ನವೆಂಬರ್ 27) ಎಪಿಸೋಡ್ನಲ್ಲಿ ರಾಜ ಮತ್ತು ಯುವರಾಣಿಯ ನಡುವೆ ಗದ್ದುಗೆಗೆ ಕಿತ್ತಾಟ ಶುರುವಾಗಿತ್ತು. ಇದೀಗ ಬಿಗ್ಬಾಸ್ (Bigg Boss) ಎರಡು ಬಣದ ಸದಸ್ಯರಿಗೆ ಟಾಸ್ಕ್ ಒಂದನ್ನು ನೀಡಿದ್ದು, ಆಟವಾಡುವ ವೇಳೆ ಸ್ಫರ್ಧಿ ರಜತ್ ಹಾಗೂ ಕ್ಯಾಪ್ಟನ್ ಮಂಜು ನಡುವೆ ಮಾತಿನ ಚಕಮಕಿಯಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಬಿಗ್ಬಾಸ್ (Bigg Boss) ಮನೆ ಸದಸ್ಯರಿಗೆ ಮಣ್ಣಿನ ಅಸ್ತ್ರ ಎಂಬ ಟಾಸ್ಕ್ ನೀಡಿದ್ದು, ಅದರಂತೆ ಮಣ್ಣಿನ ಉಂಡೆಗಳನ್ನು ಸಂಗ್ರಹಿಸಿ ಉಭಯ ತಂಡಗಳ ಸದಸ್ಯರು ಆಯುಧಗಳನ್ನು ತಯಾರಿಸಬೇಕಿದೆ. ಮಣ್ಣಿನ ಉಂಡೆಗಳನ್ನು ಸಂಗ್ರಹಿಸುವಾಗ ಸ್ಫರ್ಧಿಗಳ ನಡುವೆ ನೂಕಾಟ, ತಳ್ಳಾಟ ನಡೆದಿದ್ದು, ಇದಕ್ಕೆ ಚೈತ್ರಾ ಕುಂದಾಪುರ ಸೇರಿದಂತೆ ಮಹಿಳಾ ಸ್ಫರ್ಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಂಜು ಮತ್ತು ಮೋಕ್ಷಿತಾ ಬಣದ ರಜತ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಕುಪಿತಗೊಂಡ ರಜತ್ ನಾನು ತಳ್ಳೋದಿದ್ರೆ ಸರಿಯಾಗಿ ತಳ್ಳುತ್ತೇನೆ. ಬುರುಡೆ ಹೊಡೆದು ಹೋಗುವ ಹಾಗೆ ತಳ್ಳುತ್ತೇನೆ ಎಂದು ಎದುರಾಳಿ ತಂಡದವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ರಜತ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಮಂಜು ಬುರುಡೆ ಒಡಿತ್ತೀಯಾ ನೀನು ಎಂದು ಕೂಗಾಡಲು ಶುರು ಮಾಡಿದ್ದಾರೆ. ರೌಡಿ ಅಂತಾ ಯಾಕೆ ಹೇಳ್ತೀಯಾ ಎಂದು ರಜತ್ ಕೂಗಾಡಿದ್ದಾರೆ. ಬೆದರಿಕೆ ಇಡೋದಲ್ಲ. 54 ದಿನ ಇಲ್ಲಿ ಭಯ ಪಟ್ಟುಕೊಂಡು ಇದ್ದಿಲ್ಲ. ನಿನ್ನಾಟ ನೀನು ತೋರಿಸು, ನನ್ನಾಟ ನಾನು ತೋರಿಸ್ತೇನೆ ಎಂದು ಮಂಜು ಹೇಳಿದ್ದಾರೆ. ಅದಕ್ಕೆ ತಿರುಗೇಟು ನೀಡುವ ರಜತ್, ಆವಾಗಿಂದು ಒಂದು ಲೆಕ್ಕ, ಇವಾಗಿಂದ ಇನ್ನೊಂದು ಲೆಕ್ಕ ಅಂತಾ ಸವಾಲ್ ಎಸೆದಿದ್ದಾರೆ. ಅಸ್ತ್ರ ಮಣ್ಣಿನದೇ ಆದ್ರೂ ಬಲಿ ಪಡೆಯದೇ ಇರುತ್ತಾ? ಶೀರ್ಷಿಕೆಯಡಿ ಬಿಡುಗಡೆ ಮಾಡಲಾಗಿರುವ ಈ ಪ್ರೋಮೋ ಸಖತ್ ಟ್ರೆಂಡ್ ಆಗಿದ್ದು, ಮುಂದೆ ಏನಾಗಲಿದೆ ಎಂಬುದನ್ನು ನೋಡಲು ಇಂದಿನ ಸಂಚಿಕೆ ಪ್ರಸಾರವಾಗುವರೆಗೂ ಕಾದು ನೋಡಬೇಕಿದೆ.