ಕೌನ್ಸಿಲರ್​​ಗಳ ನಡುವೆ ಮಾರಾಮಾರಿ; ಘಟನೆಯ ವಿಡಿಯೋ ವೈರಲ್​ | Councilors

dk (19) (1)
Published on

ಚಂಢೀಗಡ: ಕೇಂದ್ರ ಗೃಹಸಚಿವ ಅಮಿತ್​ ಶಾ ರಾಜ್ಯಸಭೆಯಲ್ಲಿ ಡಾ.ಬಿ.ಆರ್​.ಅಂಬೇಡ್ಕರ್ ಬಗ್ಗೆ ಹೇಳಿದ ಹೇಳಿಕೆ ವಿರೋಧಿಸಿ ಚಂಢೀಗಡ ಮುನ್ಸಿಪಾಲ್​ ಕಾರ್ಪೋರೇಷನ್​ ಸಭೆಯಲ್ಲಿ ಕಾಂಗ್ರೆಸ್​​, ಎಎಪಿ ಮತ್ತು ಬಿಜೆಪಿ ಕೌನ್ಸಿಲರ್​​ಗಳ(Councilors) ನಡುವೆ ಮಾರಾಮಾರಿ ನಡೆದಿದ್ದು, ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕಳೆದ ವಾರ ರಾಜ್ಯಸಭೆಯಲ್ಲಿ ಸಂವಿಧಾನ ಮೇಲಿನ ಚರ್ಚೆಯ ಸಂದರ್ಭದಲ್ಲಿ ಅಮಿತ್​ ಶಾ ಹೇಳಿಕೆಗೆ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಅಂಗಿಕರಿಸಿದ ನಿರ್ಣಯವೂ ಜಗಳಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.

ವಿಡಿಯೋದಲ್ಲಿ ಏನಿದೆ?

ಇನ್ನು ಈ ಜಗಳದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಭೆ ಬಳಿಕ ಜನಪ್ರತಿನಿಧಿಗಳು ಒಬ್ಬರ ಮೇಲೆ ಒಬ್ಬರು ಕೈ-ಕೈ ಮಿಲಾಯಿಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಇಡೀ ವಿಡಿಯೋ ಸೆರೆಯಾಗಿದೆ. ಇನ್ನು ಕೆಲ ಸದಸ್ಯರು ಸಿಸಿ ಕ್ಯಾಮರಾ ನೋಡುತ್ತಲೆ ಗಲಾಟೆ ಮಾಡುತ್ತಿರುವ ದೃಶ್ಯಗಳು ಕೂಡ ಸೆರೆಯಾಗಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net