ಕ್ರಿಕೆಟಿಗ ಸಿರಾಜ್‌ಗೆ ಆಸೀಸ್ ಪ್ರವಾಸದ ಯಶಸ್ಸಿಗೆ ಸ್ಫೂರ್ತಿ ತುಂಬಿದ್ದ ಭಾವಿ ಪತ್ನಿ!

siraj web
Published on

ಹೈದರಾಬಾದ್: ಯುವ ವೇಗಿ ಮೊಹಮದ್ ಸಿರಾಜ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಕಂಡ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಟೆಸ್ಟ್ ಸರಣಿಯ 3 ಪಂದ್ಯಗಳಲ್ಲಿ ಆಡಿದ್ದ ಸಿರಾಜ್ ಭಾರತ ಪರ ಅತ್ಯಧಿಕ 13 ವಿಕೆಟ್ ಕಬಳಿಸಿ ಮಿಂಚಿದ್ದರು. ಆಸೀಸ್ ಪ್ರವಾಸದಲ್ಲಿ ಕಂಡ ಯಶಸ್ಸಿನ ಗುಟ್ಟನ್ನು ಸಿರಾಜ್ ಅವರು ಈಗ ಬಿಚ್ಚಿಟ್ಟಿದ್ದಾರೆ.

ಇದೀಗ ಆಸೀಸ್‌ನಿಂದ ತವರಿಗೆ ಮರಳಿರುವ 26 ವರ್ಷದ ಮೊಹಮದ್ ಸಿರಾಜ್, ಕಳೆದ ವರ್ಷ ಐಪಿಎಲ್‌ಗೆ ತೆರಳುವ ಮೊದಲೇ ಜೂನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ ಈ ವರ್ಷದಲ್ಲೇ ಮದುವೆಯಾಗುವುದಾಗಿಯೂ ತಿಳಿಸಿದ್ದಾರೆ.

ತಂದೆಯ ನಿಧನದ ನಡುವೆಯೂ ತವರಿಗೆ ಮರಳದೆ ಆಸೀಸ್ ಪ್ರವಾಸದಲ್ಲಿ ಮುಂದುವರಿದಿದ್ದ ಸಿರಾಜ್, ಈ ವೇಳೆ ತಮಗೆ ಭಾವಿ ಪತ್ನಿ ಬೆಂಬಲವಾಗಿ ನಿಂತಿದ್ದರು ಮತ್ತು ಸಾಕಷ್ಟು ಸ್ಫೂರ್ತಿ ತುಂಬಿದ್ದರು ಎಂದೂ ಹೇಳಿಕೊಂಡಿದ್ದಾರೆ.

ತಂದೆಯ ನಿಧನದ ಶೋಕದ ವೇಳೆ ಕುಟುಂಬದ ಜತೆಗಿರಲು ತವರಿಗೆ ಮರಳಲು ಯೋಚಿಸಿದ್ದೆ. ಆದರೆ ಕುಟುಂಬದ ಸದಸ್ಯರು, ನಾನು ಭಾರತ ಪರ ಆಡಬೇಕೆಂಬ ತಂದೆಯ ಕನಸು ನನಸಾಗಿಸಲು ಬೆಂಬಲ ನೀಡಿದ್ದರು ಎಂದು ಸಿರಾಜ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net