ಬೆಳ್ತಂಗಡಿ: ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಮಂಗಳಗಿರಿಯಲ್ಲಿ ಶ್ರೀ ದೇವಿ ನಾಗಾಂಬಿಕಾ ಅಮ್ಮನವರ ಉತ್ಸವ ಬಲಿ ಮತ್ತು ಶ್ರೀ ವರಾಹಿ ಮಂತ್ರಮೂರ್ತಿ, ನಾಗಕಲ್ಲುರ್ಟಿ ಸತ್ಯದೇವತೆ, ಕೊರಗಜ್ಜ ಮತ್ತು ಶ್ರೀ ಗುಳಿಗರಾಜ ದೈವಗಳ ಕಾಲಾವಧಿ ನೇಮೋತ್ಸವ ಫೆ.12 ಮತ್ತು 13ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
12ರಂದು ಬೆಳಗ್ಗೆ 7ಕ್ಕೆ ಪ್ರಾರ್ಥನೆ, ಸ್ಥಳ ಶುದ್ಧಿ ಪುಣ್ಯಹವಾಚನ ಗಣಹೋಮ, ನಾಗಬ್ರಹ್ಮ ದೇವರಿಗೆ ತನುತಂಬಿಲ, ಆಶ್ಲೇಷಬಲಿ, ದೈವಗಳಿಗೆ ಪಂಚಪರ್ವ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ, ಸಂಜೆ 7ಕ್ಕೆ ಉದ್ಭವ ಗಣಪತಿಗೆ ಹಾಗೂ ನಾಗಾಂಬಿಕ ಅಮ್ಮನವರಿಗೆ ಜೋಡು ರಂಗಪೂಜೆ, ರಾತ್ರಿ 10ರಿಂದ ಡೆನ್ನಾನ ಕಲಾವಿದೆರ್ ಕಾರ್ಕಳ ಅವರಿಂದ ಡೆನ್ನಾನ ತುಳು ನಾಟಕ ಪ್ರರ್ದಶನಗೊಳ್ಳಲಿದೆ.
13ರಂದು ಬೆಳಗ್ಗೆ ಮಹಾಪೂಜೆ, ಪ್ರಸಾದ ವಿತರಣೆ, ಬೆಳಗ್ಗೆ 10ರಿಂದ ರುದ್ರಯಾಗ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ ಪ್ರಸಾದ ವಿತರಣೆ, ಸಂಜೆ 5ಕ್ಕೆ ಮಹಾಪೂಜೆ, ಶ್ರೀದೇವಿ ನಾಗಾಂಬಿಕಾ ಅಮ್ಮನವರ ಉತ್ಸವ ಬಲಿ, ಕುಣಿತ ಭಜನೆ, ರಾತ್ರಿ 7ರಿಂದ ಭಂಡಾರ ಇಳಿಯುವುದು, ದೈವಗಳ, ನಾಗಾಂಬಿಕ ಅಮ್ಮನವರ ಭೇಡಿ, ಅನ್ನಪ್ರಸಾದ ವಿತರಣೆ, ರಾತ್ರಿ ದೈವಗಳ ನೇಮೋತ್ಸವ, ರಾತ್ರಿ 1ರಿಂದ ಕೊರಗಜ್ಜ ಕೋಲ, ಬೆಳಗ್ಗೆ 5ಕ್ಕೆ ಗುಳಿಗ ದೈವದ ಕೋಲ ನಡೆಯಲಿದೆ.
ಆಡಳಿತ ಮೊಕ್ತೇಸರ ರಾಜೀವ, ಅಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ ಜಯರಾಜ್ ಬಂಗೇರ, ಉಪಾಧ್ಯಕ್ಷ ಪ್ರಶಾಂತ್ ಆಚಾರ್ಯ, ಜೊತೆ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಭಾಗವಹಿಸಲಿದ್ದಾರೆ.