

ಕಡಬ: ಕ್ರೀಡೆಗೆ ಹೃದಯ, ಕುಟುಂಬ, ಜಾತಿ, ಗ್ರಾಮ, ಜಗತ್ತನ್ನು ಒಂದುಗೂಡಿಸುವ ಶಕ್ತಿ ಇದೆ. ಆದ್ದರಿಂದಲೇ ಎಲ್ಲ ದೇಶಗಳು, ಸಮುದಾಯಗಳು ಕ್ರೀಡೆಗೆ ಮಹತ್ವ ನೀಡುತ್ತಿವೆ. ಕ್ರೀಡೆಯ ಮೂಲಕ ಪ್ರೀತಿ, ಸಹಬಾಳ್ವೆ ಸಾಧ್ಯವಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಕಡಬ ತಾಲೂಕು ಹಳೆನೇರಿಂಕಿ ಸರ್ಕಾರಿ ಉ.ಹಿ.ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಒಕ್ಕಲಿಗ ಗೌಡ ಸೇವಾ ಸಂಘ ಆಲಂಕಾರು ವಲಯದ ಕ್ರೀಡಾ ಸಂಭ್ರಮ 2024-25 ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರಮಟ್ಟದ ಖೋ ಖೋ ಆಟಗಾರ ಚಂದನ್ ಮರಂಕಾಡಿ ನೇತೃತ್ವದಲ್ಲಿ ಹಳೆನೇರೆಂಕಿ ವಿಷ್ಣುಮೂರ್ತಿ ಭಜನಾ ಮಂದಿರದಿಂದ ಕ್ರೀಡಾಜ್ಯೋತಿ ತರಲಾಯಿತು. ಆಲಂಕಾರು ವಲಯ ಹಿರಿಯ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಶಿವಣ್ಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ಮಾಯಿಲಪ್ಪ ಗೌಡ ಅಲೆಪ್ಪಾಡಿ ಧ್ವಜಾರೋಹಣ ನೆರವೇರಿಸಿದರು.
ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ಅಧ್ಯಕ್ಷ ಸುರೇಶ್ ಬೈಲು, ಸ್ಪಂದನ ಸಮುದಾಯ ಸಹಕಾರ ಸಂಘ ಕಡಬ ಅಧ್ಯಕ್ಷ ಕೇಶವ ಅಮೈ, ಕೊಂಬೆಟ್ಟು ಪಪೂ ಕಾಲೇಜಿನ ಉಪನ್ಯಾಸಕ ಧರ್ಣಪ್ಪ ಗೌಡ, ತಾಲೂಕು ಮಹಿಳಾ ಒಕ್ಕಲಿಗ ಗೌಡ ಸಂಘ ಅಧ್ಯಕ್ಷೆ ವೀಣಾರಮೇಶ್ ಕೊಲ್ಲೆಸಾಗು, ಉಪಾಧ್ಯಕ್ಷೆ ಜಯಂತಿ ಆರ್.ಗೌಡ, ಊರ ಗೌಡರಾದ ಜತ್ತಪ್ಪ ಗೌಡ, ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಗೌಡ ಮರಂಕಾಡಿ, ಹಳೆನೇರೆಂಕಿ ನವಸಾಕ್ಷರತಾ ಮಹಿಳಾ ಹಾಲು ಉತ್ಪಾದಕರ ಸಂಘ ಅಧ್ಯಕ್ಷೆ ಯಶೋದಾ ಕೆ.ಎಂ., ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡ ದೋಳ, ಶಿಕ್ಷಕ ಮನೋಹರ ಮರಂಕಾಡಿ ಉಪಸ್ಥಿತರಿದ್ದರು.
ಹಳೆನೇರೆಂಕಿ ಒಕ್ಕಲಿಗ ಗೌಡ ಸೇವಾ ಸಂಘದ ಯುವ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಸ್ವಾಗತಿಸಿ. ಆಲಂಕಾರು ವಲಯ ಮಹಿಳಾ ಸಮಿತಿ ಅಧ್ಯಕ್ಷೆ ಗೀತಾ ಮರಂಕಾಡಿ ವಂದಿಸಿದರು. ಚೇತನ್ ಆನೆಗುಂಡಿ ನಿರೂಪಿಸಿದರು.
ಸಾಧಕರಿಗೆ ಸನ್ಮಾನ
ಮಾಯಿಲಪ್ಪ ಗೌಡ ಅಲೆಪ್ಪಾಡಿ, ಪೂವಣಿ ಗೌಡ ಮರಂಕಾಡಿ, ಮೇದಪ್ಪ ಗೌಡ ಎತ್ತರಪಡ್ಪು ಹಾಗೂ ದ.ಕ.ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಲಲಿತಾ ಚಕ್ರಪಾಣಿ, ಉದ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ಎಸ್‌ಆರ್‌ಕೆ ಲ್ಯಾಡರ್ಸ್‌ನ ಕೇಶವ ಅಮೈ, ರಾಷ್ಟ್ರಮಟ್ಟದ ಖೋ ಖೋ ಆಟಗಾರ ಚಂದನ್ ಮರಂಕಾಡಿ, ಕಬಡ್ಡಿ ಆಟಗಾರರಾದ ವಾತ್ಸಲ್ಯ ಬಿ.ಗೌಡ ಕೊಲ, ಕೆ.ಭವ್ಯಾ, ಧನ್ಯಶ್ರೀ, ಜನನಿ, ಶ್ರದ್ಧಾ ಕೆ.ಕುಂಟ್ಯಾನ, ಸಾತ್ವಿನ ಕೆದ್ದೊಟ್ಟೆ, ಭುವಿ ಕುಂಟ್ಯಾನ, ಸ್ಕೇಟಿಂಗ್ ಆಟಗಾರ ಶಿಹಾನ ಎ.ಆರ್., ರಾಜ್ಯಮಟ್ಟದ ಆಟಗಾರರಾದ ಅಕ್ಷಯ್ ಗೌಡ, ಚರಣ್ ಪಾಣಿಗ ಅವರನ್ನು ಸನ್ಮಾನಿಸಲಾಯಿತು.