ಹಿರಿಯ ಅಧಿಕಾರಿಗೆ ಪ್ಲಾಸ್ಮಾ ದಾನ ಮಾಡಿದ ಉರಿ ಪೊಲೀಸ್​​ಗೆ ಸನ್ಮಾನ

Police covid
Published on

ಶ್ರೀನಗರ: ಹಿರಿಯ ಅಧಿಕಾರಿಯೊಬ್ಬರಿಗೆ ಪ್ಲಾಸ್ಮಾ ದಾನ ಮಾಡಿ ಅವರ ಜೀವ ಉಳಿಸಿದ್ದಕ್ಕಾಗಿ ಪೊಲೀಸ್ ಒಬ್ಬರನ್ನು

ಉತ್ತರ ಕಾಶ್ಮೀರದ ಉರಿ ಅಧಿಕಾರಿಗಳು ಗುರುವಾರ ಸನ್ಮಾನಿಸಿದರು.

ಪೊಲೀಸ್ ಕಾನ್‌ಸ್ಟೆಬಲ್ ಸೈಯದ್ ಜುಲ್ಫಿಕರ್ ಅಲಿ ಜುಲೈ 24 ರಂದು ಜೆವಿಸಿ ಶ್ರೀನಗರದಲ್ಲಿ ಜಮ್ಮು-ಕಾಶ್ಮೀರದ ಕೆಎಎಸ್ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಕಾರ್ಯದರ್ಶಿ ತಸದುಕ್ ಜೀಲಾನಿ ಅವರಿಗೆ ಪ್ಲಾಸ್ಮಾ ದಾನ ಮಾಡಿದ್ದರು.

ಉರಿ ಸಮೀಪದ ನೂರ್ಖಾ ಗ್ರಾಮದವರಾದ ಜುಲ್ಫಿಕರ್, ಅನಂತ್‌ನಾಗ್‌ನ ಐಆರ್‌ಪಿ 11 ನೇ ಬೆಟಾಲಿಯನ್‌ ಗೆ ನಿಯೋಜನೆಗೊಂಡಿದ್ದು, ಅವರು ಇತ್ತೀಚೆಗೆ COVID-19 ನಿಂದ ಗುಣಮುಖರಾಗಿದ್ದರು.

ಉರಿ ಎಸ್‌ಡಿಎಂ ರಿಯಾಜ್ ಅಹ್ಮದ್ ಮಲಿಕ್, ಜುಲ್ಫಿಕರ್ ಗೆ ಕೃತಜ್ಞತೆ ಸಲ್ಲಿಸಿದರಲ್ಲದೆ ಮತ್ತು ಅಮೂಲ್ಯವಾದ ಜೀವ ಉಳಿಸಲು ಪ್ಲಾಸ್ಮಾ ದಾನ ಮಾಡಲು ಮುಂದೆ ಬರಬೇಕೆಂದು ಕೋವಿಡ್ -19 ನಿಂದ ಗುಣಮುಖರಾದವರಲ್ಲಿ ವಿನಂತಿಸಿದರು.

ಗುಣಮುಖರಾದ ಎಲ್ಲಾ ರೋಗಿಗಳ ಮಾಹಿತಿ ಸಂಗ್ರಹಣೆ, ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಲು ಮತ್ತು ಆ ಮೂಲಕ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಪ್ರಯತ್ನಗಳು ನಡೆದಿವೆ ಎಂದು ಬ್ಲಾಕ್ ಮೆಡಿಕಲ್ ಆಫೀಸರ್ (ಬಿಎಂಒ) ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net