ಹುಷಾರಿಲ್ಲದಿದ್ದಾಗ ನನ್ನ ತಂದೆ ಕತ್ತಲಲ್ಲಿ ಹೊತ್ತುಕೊಂಡು ವೈದ್ಯರ ಬಳಿಗೆ ನಡೆದಿದ್ದರು!

Shrikantrao Kulkarni
Published on

ತಂದೆ ಜತೆಗಿನ ಒಡನಾಟ, ಅನುಭವ, ಸ್ಮರಣೀಯ ಘಟನೆಗಳ ಕುರಿತ ಬರಹಗಳ ಆಹ್ವಾನಕ್ಕೆ ಓದುಗರಿಂದ ಪ್ರವಾಹೋಪಾದಿಯಲ್ಲಿ ಪ್ರತಿಕ್ರಿಯೆಗಳು ಹರಿದುಬಂದಿವೆ. ಅಪ್ಪನ ಪ್ರೀತಿ, ಮಮತೆ, ವಾತ್ಸಲ್ಯದ ಮಹಾಪೂರದಲ್ಲಿ ತೇಲಾಡಿರುವುದನ್ನು ಮಕ್ಕಳು ಸ್ಮರಿಸಿದ್ದಾರೆ. ನೂರಾರು ಬರಹಗಳ ಪೈಕಿ ಕೆಲವನ್ನು ಇಲ್ಲಿ ಆಯ್ದುಕೊಡಲಾಗಿದೆ.

ಜನ್ಮ ಜನ್ಮಾಂತರದಲ್ಲೂ ಋಣ ತೀರಿಸಲಾಗದ ಭಗವಂತ ಅಪ್ಪಾ. ಅಪ್ಪಾ ಅಂದಾಗಲೆಲ್ಲಾ ನನಗೆ ನೆನಪಾಗುವುದು ನನ್ನ 12 ವಯಸ್ಸಿನಲ್ಲಿ ನಡೆದ ಒಂದು ಮರೆಯಲಾಗದ ಘಟನೆ. ನಾನು ಹುಟ್ಟಿದ ಗ್ರಾಮ ಆವಾಗ ಅಷ್ಟೇನೂ ವೈದ್ಯಕೀಯ ಸೌಲಭ್ಯಗಳಿಲ್ಲದ ದಿನಗಳು. ಅದೊಂದು ದಿನ ರಾತ್ರಿಯ ಸಮಯ 1 ಗಂಟೆ ನನಗೆ ವಿಪರೀತ ಜ್ವರ-ವಾಕರಿಕೆ ಬಂದು ಬಳಲುತ್ತಿದ್ದ ನನ್ನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು 1 ಕೀ.ಮಿ ನಡೆದು ಗ್ರಾಮದ ವೈದ್ಯರ ಮನೆಗೆ ಕತ್ತಲಲ್ಲಿ ತೆರಳಿದರು. ಮಗನಿಗೆ ಏನಾಗುತ್ತದೆಯೋ ಎಂದು ಗಾಬರಿಯಿಂದ ಕೂಗಿದಾಗ ವೈದ್ಯರು ಕಿಟಕಿಯಿಂದಲೇ ವಿಚಾರಿಸಿ ಮಾತ್ರೆಗಳನ್ನು ನೀಡಿದರು, ಆ ಮಧ್ಯರಾತ್ರಿ ನಮ್ಮ ತಂದೆಯವರು ಪಟ್ಟ ಶ್ರಮ ಇವತ್ತಿಗೂ ನೆನೆದಾಗ ಕಣ್ಣಂಚಿನಲ್ಲಿ ನೀರುಬರುವುದು. ತಂದೆ ತನ್ನ ಮಕ್ಕಳಿಗಾಗಿ ತನ್ನ ಜೀವನವನ್ನೇ ಲೆಕ್ಕಿಸದೆ ಹೋರಾಡುವ ಕಣ್ಣಿಗೆ ಕಾಣುವ ಭಗವಂತ.

| ಶ್ರೀಕಾಂತರಾವ್ ಕುಲಕರ್ಣಿ

ಲಿಂಗಸುಗೂರು, ರಾಯಚೂರ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net