ನ್ಯೂಯಾರ್ಕ್ ಆಲ್ಬನಿ ಕನ್ನಡಿಗರಿಂದ 'ಫಾದರ್ಸ್ ಡೇ' ಆಚರಣೆ

Day
Published on

ನ್ಯೂಯಾರ್ಕ್: ಅಲ್ಬನಿ ನಗರದ ಕನ್ನಡ ಸಂಘದ ಸದಸ್ಯರು ಮೋರೋ ಸ್ಟೇಟ್ ಪಾರ್ಕ್​ನಲ್ಲಿ ಜೂನ್ 18ರಂದು 'ಫಾದರ್ಸ್ ಡೇ' ಆಚರಿಸಿದರು. ಈ ಹಿನ್ನೆಲೆಯಲ್ಲಿ ಎಲ್ಲರೂ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಇದೇ ವೇಳೆ ಮಕ್ಕಳು ತಮ್ಮ ತಂದೆಗೆ ನೀಡಿರುವಂತಹ ಧ್ವನಿ ಸಂದೇಶಗಳನ್ನು ಬಿತ್ತರಿಸಲಾಯಿತು.

'ಫಾದರ್ಸ್ ಡೇ' ಆಚರಣೆ ಹಿನ್ನೆಲೆ ಮನರಂಜನಾ ಆಟಗಳನ್ನು ಆಯೋಜಿಸಲಾಗಿತ್ತು. ಅಲ್ಬನಿ ನಗರ ಕನ್ನಡ ಸಂಘದ ಸದಸ್ಯರು ವಾಲಿಬಾಲ್, ಕ್ರಿಕೆಟ್, ಲೇಮನ್ ಸ್ಪೂನ್ ರೇಸ್, ಬಿಂಗೋ ಲಾಟರಿ ನಂತಹ ಆಟಗಳಲ್ಲಿ ಪಾಲ್ಗೊಂಡರು. ಬಳಿಕ ಆಲ್ಬನಿ ಕನ್ನಡ ಸಂಘದ ಕಾರ್ಯಕಾರಿಣಿ ಸಮಿತಿಯ 11 ಜನ ಸದಸ್ಯರನ್ನು ಎಲ್ಲರಿಗೂ ಪರಿಚಯಿಸಲಾಯಿತು.

ಈ ಸಂದರ್ಭದಲ್ಲಿ ಆಲ್ಬನಿ ಕನ್ನಡ ಸಂಘದ ಅಧ್ಯಕ್ಷೆ ಸುನಿತಾ ವಿಜಯ್, ಬೆಂಕಿ ಬಸಣ್ಣ, ಶ್ರೀಕುಮಾರ್, ಮಮತಾ ಕಿರಣ್, ಉಮಾ ಶ್ರೀನಿವಾಸ್ ಸೇರಿದಂತೆ ಸಂಘದ ಸದಸ್ಯರು 'ಫಾದರ್ಸ್ ಡೇ' ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net