More

    ವಿಡಿಯೋ: ಮಗಳಿಗಾಗಿ ಗ್ಯಾರೇಜ್​ಅನ್ನೇ ಕ್ಲಾಸ್​ ರೂಮ್​ ಆಗಿ ಮಾರ್ಪಡಿಸಿದ ತಂದೆ…!

    ನ್ಯೂಯಾರ್ಕ್​: ಕರೊನಾ ಸಂಕಷ್ಟ ನಮ್ಮ ಜೀವನ ವಿಧಾನವನ್ನೇ ಬದಲಿಸಿದೆ. ಸದ್ಯ ಶಾಲೆಗಳು ಆರಂಭವಾಗದ ಕಾರಣ ಮನೆಯೇ ಮಕ್ಕಳಿಸ್ಕೂಲ್​ ಆಗಿದೆ. ವಿಡಿಯೋ ಆ್ಯಪ್​ಗಳಲ್ಲಿ ಹಾಜರಾಗುವ ಟೀಚರ್​ಗಳು ಪಾಠ ಮಾಡ್ತಾರೆ. ಮಕ್ಕಳು ತಾವಿದ್ದಲ್ಲೇ, ಇರುವ ಸ್ಥಿತಿಯಲ್ಲೇ ಪಾಠ ಕೇಳ್ತಾರೆ…!

    ತರಗತಿಯಲ್ಲಿನ ಪಾಠ ಸದ್ಯಕ್ಕಂತೂ ಮರೀಚಿಕೆಯಾಗಿದೆ. ಆದರೆ, ಇಲ್ಲೊಬ್ಬ ತನ್ನ ಮಗಳಿಗಾಗಿ ಮನೆಯ ಗ್ಯಾರೇಜ್​ ಅನ್ನೇ ಕ್ಲಾಸ್​ರೂಮ್​ ಆಗಿ ಮಾರ್ಪಡಿಸಿದ್ದಾನೆ. ಈ ವಿಡಿಯೋ ಈಗ ಭಾರಿ ಮೆಚ್ಚುಗೆ ಗಳಿಸಿದೆ.

    ಇದನ್ನೂ ಓದಿ; VIDEO: ಫೋನ್ ಎ- ಫ್ರೇಂಡ್​ ಅಂತಾ ಹೆಂಡತಿಗೆ ಕರೆ ಮಾಡಿದ್ರೆ ಉತ್ತರಿಸಿದ್ದು ಇನ್ಯಾರೋ? ಲೈವ್​ನಲ್ಲಿ ಬಯಲಾಯ್ತಾ ಪತ್ನಿ ಅಫೇರ್​…! 

    ವಿಡಿಯೋದಲ್ಲಿ ಬಾಗಿಲು ತೆರೆಯುತ್ತಿದ್ದಂತೆ ಮಗುವೊಂದು ಡೆಸ್ಕ್​ ಮೇಲೆ ಕುಳಿತು ಪಾಠ ಕೇಳುತ್ತಿರುವುದನ್ನು ನೋಡಬಹುದು. ಎದುರಿಗೆ ನಿಂತು ಶಿಕ್ಷಕಿಯೇ ಪಾಠ ಹೇಳುತ್ತಿದ್ದಾಳೆ ಎನಿಸುತ್ತದೆ. ಏಕೆಂದರೆ, ಶಿಕ್ಷಕಿಯ ಕಟೌಟ್​ಗೆ ಟ್ಯಾಬ್ಲೆಟ್​ ಅಂಟಿಸಲಾಗಿದ್ದು ಅದರಲ್ಲಿ ಪಾಠ ಮಾಡುತ್ತಿರುವುದನ್ನು ನೋಡಬಹುದು.

    ಬಿಳಿಯ ಬೋರ್ಡ್​ ನೇತು ಹಾಕಲಾಗಿದೆ. ಅದರಲ್ಲಿ ಲಿಲ್ಲಿಯನ್ಸ್​ ಕ್ಲಾಸ್​ ಎಂದು ಬರೆದಿದ್ದರೆ, ಪಕ್ಕದಲ್ಲಿ ವೇಳಾಪಟ್ಟಿಯಿದೆ. ವಾರದ ಎಲ್ಲ ದಿನಗಳ ಪಾಠದ ಪಟ್ಟಿ ಅಲ್ಲಿದೆ.
    ಜತೆಗೆ ಕೋಣೆಯಲ್ಲಿ ದೊಡ್ಡ ಟಿವಿಯೊಂದನ್ನು ನೇತುಹಾಕಲಾಗಿದೆ. ಕೆಲ ಮಾರ್ಕರ್​ ಹಾಗೂ ಬೋರ್ಡ್​ ಮೇಲೆ ಬರೆಯಲು ಉಪಯೋಗಿಸವ ವಸ್ತುಗಳನ್ನು ಇಡಲಾಗಿದೆ. ಮಗಳ ಮೇಲಿನ ಪ್ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮಗಳಿಗಾಗಿ ಗ್ಯಾರೇಜ್​ಅನ್ನೇ ಕ್ಲಾಸ್​ರೂಮ್​ ಆಗಿ ಪರಿವರ್ತಿಸಿದ ತಂದೆ…..!

    ಮಗಳು ಶಾಲೆಯ ತರಗತಿಯಲ್ಲಿಯೇ ಕುಳಿತು ಕಲಿಯುತ್ತಿದ್ದಾಳೆ ಎನ್ನುವ ವಾತಾವರಣ ಸೃಷ್ಟಿಸಿದ ತಂದೆ. ಮನೆಯ ಗ್ಯಾರೇಜ್​ಅನ್ನೇ ಕ್ಲಾಸ್​ರೂಮ್​ ಆಗಿ ಪರಿವರ್ತಿಸಿದ್ದಾನೆ.

    Posted by Vijayavani on Saturday, September 12, 2020

    35ನೇ ವರ್ಷಕ್ಕೆ ಮರೆಯಾದ ಅನುರಾಧಾ ಪೌಡ್ವಾಲ್​ ಪುತ್ರ ಆದಿತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts