TikTok ಡಿಲಿಟ್‌ ಮಾಡಲು ನಿರಾಕರಿಸಿದ ಮಗಳನ್ನು ಗುಂಡಿಕ್ಕಿ ಕೊಂದ ತಂದೆ

TikTok
Published on

TikTok: ಟಿಕ್ ಟಾಕ್ ಖಾತೆಯನ್ನು ಡಿಲಿಟ್‌ ಮಾಡಲು ನಿರಾಕರಿಸಿದ್ದಕ್ಕಾಗಿ ಮಗಳನ್ನೇ ತಂದಿಯೊಬ್ಬ ಗುಂಡಿಕ್ಕಿ ಕೊಂದ ಘಟನೆ ಬುಧವಾರ (ಜು.೯) ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

ಟಿಕ್ ಟಾಕ್ ಸಾಮಾಜಿಕ ಮಾಧ್ಯಮ ಖಾತೆಯನ್ನು ಅಳಿಸುವಂತೆ ತಂದೆ ತನ್ನ ಮಗಳಿಗೆ ಪದೇ ಪದೇ ಹೇಳಿದ್ದರು. ಆದರೆ ಮಗಳು ಅದನ್ನು ನಿರಾಕರಿಸಿದಾಗ, ಅವನು ಗುಂಡು ಹಾರಿಸಿ ಅವಳನ್ನು ಕೊಂದನು ಎಂದು ಆರೋಪಿಸಲಾಗಿದೆ. ರಾವಲ್ಪಿಂಡಿ ಜಿಲ್ಲೆಯ ಧೋಕ್ ಚೌದ್ರಿಯನ್ ತಖ್ತ್ ಪರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಗುಂಡಿನ ದಾಳಿಯ ನಂತರ ವ್ಯಕ್ತಿ ಪರಾರಿಯಾಗಿದ್ದಾನೆ, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸಿಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net