ಮಗನನ್ನೇ ಮದುವೆಯಾದ ಮಲತಾಯಿ! ಕಕ್ಕಾಬಿಕ್ಕಿಯಾದ ಆಕೆಯ ಗಂಡ ಮಾಡಿದ್ದೇನು? | Marriage

dk - 2025-07-09T171811.629
Published on

Marriage: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಪ್ರೇಮ ಪ್ರಕರಣದ ವಿಚಿತ್ರ ಘಟನೆಗಳು ನಡೆಯುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಮಲತಾಯಿ ಒಬ್ಬಳು ತನ್ನ ಮಗನ್ನೇ ಓಡಿಹೋಗಿ ಮದುವೆಯಾದ ವಿಚಿತ್ರ ಘಟನೆ ಹರಿಯಾಣದಲ್ಲಿ ಬೆಳಕಿಗೆ ಬಂದಿದೆ.

ಹೌದು, ಹರಿಯಾಣದ ನುಹಾ ಜಿಲ್ಲೆಯ ಬಸ್ದಲ್ಲಾ ಗ್ರಾಮ ನಿವಾಸಿ ರಾಮ್​ ಕಿಶನ್​ ಎಂಬ ವ್ಯಕ್ತಿಯ ಪತ್ನಿ ಸೋಹ್ನಾ ತನ್ನ ಮಗನನ್ನೇ ಮದುವೆಯಾಗಿದ್ದಾಳೆ ಎಂದು ವರದಿಯಾಗಿದೆ. ಅಲ್ಲದೆ, ಈ ಕುರಿತು ಪೊಲೀಸ್​ ದೂರು ಕೂಡ ನೀಡಲಾಗಿದೆ.

ರಾಮ್​ ಕಿಶನ್​ 18 ವರ್ಷಗಳ ಹಿಂದೆ ಫಿರೋಜಬಾದ್​​ನ ನಿವಾಸಿಯಾದ ಯುವತಿಯನ್ನು ಮದುವೆಯಾಗಿದ್ದನು. ಬಳಿಕ ದಂಪತಿ ಗಂಡು ಮಗು ಜನನವಾಯಿತು. ಮಗು ಜನಿಸಿದ ಕೆಲ ವರ್ಷದ ನಂತರ ರಾಮಕಿಶನ್​​ ಪತ್ನಿ ಕಾಯಿಲೆಯಿಂದ ಮೃತಪಟ್ಟರು. ಇದಾದ ಮೂರು ವರ್ಷಗಳ ನಂತರ ರಾಮ್​ ಕಿಶನ್​ ಎರಡನೇ(ಸೋಹ್ನಾ) ಮದುವೆಯಾದನು. ಮಗನನ್ನು ಪಟ್ಟಣಕ್ಕೆ ಕೆಲಸಕ್ಕೆ ಸೇರಿದ್ದನು. ಬಹು ಕೆಲ ವರ್ಷಗಳ ಕಾಲ ಅಪ್ಪನಿಂದ ಮಗ ದೂರ ಇದ್ದನು.

ಆದರೆ, ಇತ್ತೀಚಿಗೆ ಮಗ ಮನೆಗೆ ಮರಳಿದ್ದನು. ಆತ ಬಂದ ಕೆಲ ದಿನಗಳಲ್ಲೇ ಮಲತಾಯಿಯ ಜತೆಗೆ ಪ್ರೇಮಾಂಕುರವಾಗಿದೆ. ಇದೀಗ ರಾಮ್​ ಕಿಶೊರ್​ಗೆ ತಿಳಿಸದೇ ಮಗನ ಜತೆ ತಾಯಿ ಓಡಿ ಹೋಗಿದ್ದಾಳೆ. ಅಲ್ಲದೆ, ಮನೆಯಲ್ಲಿನ 30 ಸಾವಿರ ದುಡ್ಡು, ಆಭರಣ ಕೊಂಡೊಯ್ದಿದ್ದಾರೆ ಎಂದು ರಾಮ್​ ಕಿಶನ್ ಪೊಲೀಸರ ಮುಂದೆ ಹೇಳಿದ್ದಾನೆ ಎಂದು ವರದಿಯಾಗಿದೆ. ಮಗ ಮತ್ತು ಪತ್ನಿಯನ್ನು ಪತ್ತೆಮಾಡುವಂತೆ ರಾಮ್​ ಕಿಶನ್​​ ಪೊಲೀಸ್​​ ಠಾಣೆಗೆ ದೂರು ನೀಡಿದ್ದಾನೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net