ಮಗಳ ಖಾಸಗಿತನದ ವಿಡಿಯೋಗಳನ್ನು ವಾಟ್ಸಾಪ್ ಗ್ರೂಪ್‌ಗಳಿಗೆ ರವಾನಿಸಿದ ತಂದೆ !

Harrassment
Published on

ಪಡುಬಿದ್ರಿ: ಮಗಳು ಹಾಗೂ ಆಕೆ ಪ್ರಿಯಕರನ ಖಾಸಗಿತನದ ವಿಡಿಯೋಗಳನ್ನು ತಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ವಿಲಕ್ಷಣಕಾರಿ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ. ಆರೋಪಿ ಆಸೀಫ್ ಯಾನೆ ಆಸೀಫ್ ಆಪದ್ಭಾಂದವನ ವಿರುದ್ಧ ಪತ್ನಿ ನೀಡಿದ ದೂರಿನಂತೆ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ಕಂಚಿನಡ್ಕ ನಿವಾಸಿ ಆರೋಪಿಯ ಪುತ್ರಿ ಹಾಗೂ ತೀರ್ಥಹಳ್ಳಿಯ ಅವರ ಸಂಬಂಧಿ ತೌಸೀಫ್ ಪರಸ್ಪರ ಪ್ರೀತಿಸುತ್ತಿದ್ದರು. ಈ ಕುರಿತು ಮನೆಯಲ್ಲಿ ಜಗಳ ಮಾಡಿದ್ದ ಆರೋಪಿ ತೌಸೀಫ್‌ನನ್ನು ಕರೆಸಿ ಆತನಿಗೆ ಹೊಡೆದಿದ್ದ. ಬಳಿಕ ಆತ ಹಾಗೂ ತನ್ನ ಮಗಳ ಫೋನ್ ಕಸಿದು ಅದರಲ್ಲಿದ್ದ ವಿಡಿಯೋಗಳನ್ನು ತನ್ನ ಫೋನ್‌ಗೆ ವರ್ಗಾಯಿಸಿ, ಅವುಗಳನ್ನು ಹಲವು ವಾಟ್ಸಾಪ್ ಗ್ರೂಪ್‌ಗಳಿಗೆ ರವಾನಿಸಿದ. ವಿಷಯ ತಿಳಿದು ಆಕ್ಷೇಪಿಸಿದ ಪತ್ನಿ ಹಾಗೂ ಪುತ್ರಿಗೆ ಹಲ್ಲೆ ಮಾಡಿದ್ದ. ಈ ಕುರಿತು ಪತ್ನಿ ಉಡುಪಿಯ ಸೆನ್ ಠಾಣೆಗೆ ತೆರಳಿ ದೂರು ನೀಡಿ ಉಚ್ಚಿಲದ ತವರು ಮನೆಗೆ ತರಳಿದರು. ಅಲ್ಲಿಗೂ ಬಂದ ಆಸೀಫ್ ಗಲಾಟೆ ಮಾಡಿದ. ಘಟನೆಗಳಿಂದ ಮನನೊಂದ ಪುತ್ರಿ ಫಿನಾಯಿಲ್ ಕುಡಿದು ಅಸ್ವಸ್ಥಳಾಗಿದ್ದಾಳೆ. ಆಕೆಯನ್ನು ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗಳ ಖಾಸಗಿತನಕ್ಕೆ ಭಂಗ ತಂದಿರುವ ಆರೋಪದಡಿ ಪತ್ನಿ ಪಡುಬಿದ್ರಿ ಪೊಲೀಸ್ ಠಾಣೆಗೂ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net