ಅತ್ಯಂತ ಅಮಾನವೀಯ ಘಟನೆ: ಹುಟ್ಟಿದ ಬೆನ್ನಲ್ಲೇ ಅವಳಿ ಮಕ್ಕಳಿಗೆ ವಿಷವುಣಿಸಿದ ತಂದೆ

Twins
Published on

ಹೈದರಾಬಾದ್​: ಮದುವೆಯಾಗಿ ಅನೇಕ ವರ್ಷಗಳೇ ಕಳೆದರು ಮಕ್ಕಳಾಗದ ದಂಪತಿಗಳು ಪೂಜೆ-ಪುನಸ್ಕಾರ ಹಾಗೂ ವ್ರತ ಸೇರಿದಂತೆ ತಪ್ಪಸ್ಸನೇ ಮಾಡುತ್ತಾರೆ. ವೈದ್ಯಕೀಯವಾಗಿಯೂ ಸಾಕಷ್ಟು ಪ್ರಯತ್ನಿಸಿ ತಮ್ಮ ಬಂಜೆತನ ನಿವಾರಿಸಿಕೊಳ್ಳಲು ಶ್ರಮಪಡುತ್ತಾರೆ. ಹೀಗಿರುವಾಗ ಹುಟ್ಟಿದ ಮಕ್ಕಳಿಗೆ ವಿಷವುಣಿಸುವವರು ನಮ್ಮ ನಡುವೆ ಇರುವುದು ದುರಾದೃಷ್ಟಕರ ಸಂಗತಿಯೇ ಸರಿ.

ಹೌದು, ಇಂಥದ್ದೇ ಒಂದು ಘಟನೆ ತೆಲಂಗಾಣದ ಮೆಹಬೂಬ್​ನಗರ ಜಿಲ್ಲೆಯ ಗಂಡೀಡ್​​ ಮಂಡಲದ ನಾಂಚೆರ್ಲಾ ಗ್ರಾಮದಲ್ಲಿ ನಡೆದಿದೆ. ಹುಟ್ಟಿದ ಒಂದೇ ದಿನದಲ್ಲಿ ಪಾಪಿ ತಂದೆಯೊಬ್ಬ ತನ್ನ ಅವಳಿ ಹೆಣ್ಣು ಮಕ್ಕಳಿಗೆ ವಿಷವುಣಿಸಿರುವುದು ಅತ್ಯಂತ ಅಮಾನವೀಯ ಘಟನೆಯಾಗಿದೆ.

ಈ ಘಟನೆ ಕೇಳಿದ ಕೂಡಲೇ ರವಿ ಆಸ್ಪತ್ರೆಗೆ ಧಾವಿಸಿ ಬಂದ ತೆಲಂಗಾಣ ಸಚಿವ ವಿ ಶ್ರೀನಿವಾಸ್​ ಗೌಡ, ಎಷ್ಟೇ ಖರ್ಚಾದರೂ ಸರಿ ಹಣದ ಬಗ್ಗೆ ನೀವು ಯೋಚಿಸಿ ಬೇಡಿ, ಹೇಗಾದರೂ ಮಕ್ಕಳ ಪ್ರಾಣವನ್ನು ಉಳಿಸಿ ಎಂದು ವೈದ್ಯರ ಬಳಿ ಕೇಳಿಕೊಂಡಿದ್ದಾರೆ. ಇನ್ನು ವಿಷವುಣಿಸಲು ಕಾರಣವೇನೆಂದರೆ ತಂದೆಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ. ಅಲ್ಲದೆ, ಇದರ ಬೆನ್ನಲ್ಲೇ ತನ್ನ ಆಸೆಗೆ ವಿರುದ್ಧವಾಗಿ ಎರಡನೇ ಬಾರಿಯೂ ಅದರಲ್ಲೂ ಅವಳಿ ಹೆಣ್ಣು ಮಕ್ಕಳು ಜನಿಸಿದ್ದರಿಂದ ಆತನ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿಯೇ ವಿಷವುಣಿಸಿದ್ದಾನೆ.

ತಂದೆಯ ಹೀನ ಕೃತ್ಯದ ವಿರುದ್ಧ ಕಿಡಿಕಾರಿರುವ ಸಚಿವ ಶ್ರೀನಿವಾಸ್​ ಗೌಡ ಆತನ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೊಲೀಸರಿಗೆ ಸೂಚಿಸಿದ್ದಾರೆ. ಮಾಹಿತಿ ತಿಳಿದ ಕುಟುಂಬ ಸದಸ್ಯರು ಸಹ ಆಸ್ಪತ್ರೆಗೆ ಧಾವಿಸಿ ಬಂದು ಮಕ್ಕಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವೈದ್ಯರಿಗೆ ಧನ್ಯವಾದ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net