

ರೇವಾ: ವಿದ್ಯಾರ್ಥಿನಿಯ ತಂದೆಯೊಬ್ಬ ಶಾಲಾ ಶಿಕ್ಷಕರ ಬೆರಳನ್ನು ಮುರಿದು ಹಾಕಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ರೇವಾ ಬಳಿ ನಡೆದಿದೆ.
ಇದನ್ನೂ ಓದಿ: ಬೆಕ್ಕು ಅಡ್ಡ ಬಂದಿದ್ದಕ್ಕೆ ಅಪಶಕುನವೆಂದು ಕಾರು ನಿಲ್ಲಿಸಿದ ಕಳ್ಳರು: ಆಮೇಲೆ ನಡೆದಿದ್ದು ಮಾತ್ರ..
ಘಟನೆಗೆ ಸಂಬಂಧಿಸಿದಂತೆ 45 ವರ್ಷದ ಜಗನ್ನಾಥ್ ಸಾಹು ಎಂಬಾತನು, ಶಿಕ್ಷಕ ಮಹೇಂದ್ರ ಸಿಂಗ್ ಏಂಬುವರ ಬೆರಳನ್ನು ಮುರಿದಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಹಿನ್ನೆಲೆ:
ಸ್ಥಳೀಯ ಶಾಲೆಯೊಂದರಲ್ಲಿ ಜಗನ್ನಾಥ್ ಸಾಹುವಿನ ಮಗಳು 7ನೇ ತರಗತಿಯನ್ನು ಓದುತ್ತಿದ್ದು, ಶಾಲಾ ಶಿಕ್ಷಕನು ಆಕೆಗೆ ಶಾಲೆಯ ಆವರಣವನ್ನು ಸ್ವಚ್ಛಗೊಳಿಸುವಂತೆ ಹೇಳಿದ್ದ. ಈ ವೇಳೆ ಆಕೆ ನಿರಾಕರಿಸಿದಾಗ ಥಳಿಸಿದ್ದಾನೆ. ವಿದ್ಯಾರ್ಥಿನಿಯು ಮನೆಗೆ ಹೋಗಿ ಶಾಲೆಯಲ್ಲಿ ನಡೆದ ವಿಷಯವನ್ನು ತಂದೆಗೆ ತಿಳಿಸಿದಾಗ ಆತನಿಗೆ ಕೋಪ ಬಂದಿದ್ದು, ಆತ ಮರುದಿನ ಶಾಲೆಗೆ ಬಂದಿದ್ದ.
ಶಿಕ್ಷರೊಂದಿಗಿನ ಭೇಟಿ ವೇಳೆ ಸಾಹು ವಾಗ್ವಾದಕ್ಕಿಳಿದಿದ್ದು, ಅದು ಸ್ವಲ್ಪ ಸಮಯದ ನಂತರ ಜಗಳಕ್ಕೆ ತಿರುಗಿದೆ. ಈ ನಡುವೆ ಸಾಹು ಶಿಕ್ಷಕನ ಬಲ ಬೆರಳಿನ ತುದಿಯನ್ನು ಬಲವಾಗಿ ಕಚ್ಚಿದ್ದು, ಬೆರಳಿನ ಭಾಗ ಮುರಿದು ನೆಲದ ಮೇಲೆ ಬಿದ್ದಿದೆ. ಕೂಡಲೇ ಶಿಕ್ಷಕನು ಪೊಲೀಸರಿಗೆ ದೂರು ನೀಡಿದ್ದು, ಪೋಲಿಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಆ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಲ್ಲಿಂದ ಜೈಲಿಗೆ ಕಳುಹಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆ ಉಸ್ತುವಾರಿ ವಿಜಯ್ ಸಿಂಗ್ ಪರಿಹಾರ್ ತಿಳಿಸಿದ್ದಾರೆ. ಆದರೆ ಮತ್ತೊಂದೆಡೆ ಶಿಕ್ಷಕ ಬಾಲಕಿಗೆ ಥಳಿಸಿದ್ದಾರೆ ಎಂದು ಶಾಹು ಕುಟುಂಬದವರು ಆರೋಪಿಸಿದ್ದು, ಸದ್ಯ ಈ ವಿಚಾರದಲ್ಲಿ ತನಿಖೆ ನಡೆಯುತ್ತಿದೆ ಎಂದು ಪೋಲಿಸರು ಹೇಳಿದ್ದಾರೆ.(ಏಜೆನ್ಸೀಸ್)