ಏಕಾಏಕಿ ಬ್ಯಾಲೆನ್ಸ್ ತಪ್ಪಿ 8ನೇ ಮಹಡಿಯಿಂದ ಬಿದ್ದ ತಂದೆ, ಮಗಳ ದಾರುಣ ಸಾವು..

pimpri father and daughter
Published on

ಪಿಂಪ್ರಿ: ಆಟವಾಡುತ್ತಿದ್ದ ವೇಳೆ ಎರಡೂವರೆ ವರ್ಷದ ಬಾಲಕಿ ಮತ್ತು ಆಕೆಯ ತಂದೆ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡ್ ಪ್ರದೇಶದಲ್ಲಿ ನಡೆದಿದೆ.

ಇದನ್ನೂ ಓದಿ: ಚಂದ್ರಯಾನ ನವಭಾರತ ಚೈತನ್ಯದ ಸಂಕೇತ; ಬಾಹ್ಯಾಕಾಶಕ್ಕೂ ಭಾರತೀಯ ಪುತ್ರಿಯರ ಸವಾಲು

ಮೃತರನ್ನು ರಮೇಶ್ ಮಾರುತಿ ಲಗಾಡ್ (34) ಮತ್ತು ಎರಡೂವರೆ ವರ್ಷದ ಮಗಳು ಶ್ರೇಯಾ ಎಂದು ಗುರುತಿಸಲಾಗಿದ್ದು, ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಕಳೆದ ಒಂದೂವರೆ ವರ್ಷದಿಂದ ರಮೇಶ್ ತನ್ನ ಪತ್ನಿ ಮತ್ತು ಮಗಳೊಂದಿಗೆ ಇಂದ್ರಾಯಣಿ ವಾಟಿಕಾ ಹೆಸರಿನ ಕಟ್ಟಡದಲ್ಲಿ ವಾಸವಾಗಿದ್ದು, ಸ್ವಂತ ಅಪಾರ್ಟ್‌ಮೆಂಟ್ ಕೂಡ ಹೊಂದಿದ್ದಾನೆ.

ಈತ ಸೆಂಟ್ರಲ್ ಆರ್ಡನೆನ್ಸ್ ಡಿಪೋದಲ್ಲಿ (ಸಿಒಡಿ) ಉದ್ಯೋಗಿಯಾಗಿದ್ದು, ಭಾನುವಾರ ರಜೆ ಇದ್ದ ಕಾರಣ ಕಟ್ಟಡದ ಕೆಳಗೆ ಮಗಳ ಜತೆ ಆಟವಾಡುತ್ತಿದ್ದ. ಆ ಬಳಿಕ ಇಬ್ಬರು ತಮ್ಮ ಮನೆಯ ಎಂಟನೇ ಮಹಡಿಗೆ ಹೋಗಿ ಮತ್ತೆ ಆಟವಾಡುತ್ತಿದ್ದ ವೇಳೆ ಏಕಾಏಕಿ ಬ್ಯಾಲೆನ್ಸ್ ತಪ್ಪಿ ಕಾಲು ಜಾರಿ ಎಂಟನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಮುನ್ನ ಇಬ್ಬರೂ ಮೃತಪಟ್ಟಿದ್ದಾರೆ. ಈ ಘಟನೆಯ ಆಘಾತವನ್ನು ಸಹಿಸಲಾಗದೆ ಆತನ ಪತ್ನಿಯೂ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಕೆಯನ್ನು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net