More

    ಸೇನೆಯಲ್ಲಿ ಕೆಲಸ ಸಿಗದ ಹಿನ್ನೆಲೆ: ಈತ ಮಾಡಿದ್ದೇನು ಗೊತ್ತಾ..?

    ಕರೀಂನಗರ: ಕೆಲಸ ಸಿಗದ ಹಿನ್ನೆಲೆಯಲ್ಲಿ ಯುವಕನೊಬ್ಬ ಕಳ್ಳನಾಗಿರುವ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ.

    ಪಲ್ನಾಡು ಜಿಲ್ಲೆಯ ಮಾಚರ್ಲ ಮಂಡಲದ ತಲ್ಲಪಲ್ಲಿ ಗ್ರಾಮದ ನಿವಾಸಿ ತೆಲಗೊರ್ಲ ಗೋಪಾಲಕೃಷ್ಣ ಸೇನೆಯಲ್ಲಿ ಉದ್ಯೋಗ ಪಡೆಯುವ ಗುರಿ ಹೊಂದಿದ್ದನು. ಕೆಲ ಸಮಯದ ಹಿಂದೆ ಕರೀಂನಗರ ಜಿಲ್ಲೆಯ ತಿಮ್ಮಾಪುರ ಮಂಡಲದ ರಾಮಕೃಷ್ಣ ಕಾಲೋನಿಯ ತರಬೇತಿ ಕೇಂದ್ರದಲ್ಲಿ ಉದ್ಯೋಗ ತರಬೇತಿಗೆ ಸೇರಿದ್ದು, ಸೇನೆಯ ಆಯ್ಕೆಯ ಪ್ರಕ್ರಿಯೆ ವೇಳೆ ಈತ ಕೆಲಸವನ್ನು ಪಡೆಯುವಲ್ಲಿ ವಿಫಲನಾಗಿದ್ದ.

    ಇದನ್ನೂ ಓದಿ: I.N.D.I.A. ಮೈತ್ರಿಕೂಟದ ಪರ ಪ್ರಧಾನಿ ಅಭ್ಯರ್ಥಿ ‘ಇವರೇ’ ಎಂದ ರಾಜಸ್ಥಾನ ಸಿಎಂ..!

    ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದ ಯುವಕ, ಸುಲಭವಾಗಿ ಹಣ ಸಂಪಾದಿಸಲು ಕಳ್ಳತನವನ್ನೇ ಮಾರ್ಗವಾಗಿ ಆರಿಸಿಕೊಂಡು ಇದೇ ತಿಂಗಳ 17ರಂದು ತಿಮ್ಮಾಪುರ ಮಂಡಲ ಮಹಾತ್ಮನಗರದಲ್ಲಿ ಬೀಗ ಹಾಕಿದ್ದ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದನು. ಮನೆಯಲ್ಲಿದ್ದ ರೂ.80 ಸಾವಿರ ನಗದು ಹಾಗೂ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿ ಕದ್ದ ಸೊತ್ತನ್ನು ಗುಂಟೂರಿಗೆ ಕೊಂಡೊಯ್ದು ಅಲ್ಲಿ ಬ್ಯಾಂಕಿನಲ್ಲಿ ಠೇವಣಿ ಇಟ್ಟು ಆ ಬಳಿಕ ಹಣವನ್ನು ತೆಗೆದುಕೊಂಡಿದ್ದನು.

    ತದನಂತರ ಅದೇ ಹಣದಲ್ಲಿ ಮೋಜು ಮಾಡಿ ಮರಳಿ ರಾಮಕೃಷ್ಣ ಕಾಲೋನಿಗೆ ಬರುತ್ತಿದ್ದಾಗ ಈತನ ಬಗ್ಗೆ ಮಾಹಿತಿ ಪಡೆದ ಎಲ್‌ಎಂಡಿ ಪೊಲೀಸರು ಕಟ್ಟೆಚ್ಚರ ವಹಿಸಿ ಹಿಡಿದಿದ್ದಾರೆ. ಆರೋಪಿಯಿಂದ ರೂ.40 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಕಳ್ಳತನ ನಡೆದ ಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಗೋಪಾಲಕೃಷ್ಣ ಅನುಮಾನಾಸ್ಪದವಾಗಿ ಕಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯಲ್ಲಿ ಆತ ತಪ್ಪೊಪ್ಪಿಕೊಂಡ ನಂತರ ಆತನಿಂದ ನಗದನ್ನು ವಶಪಡಿಸಿಕೊಂಡು ರಿಮಾಂಡ್‌ಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts