More

    ಹೆರಿಗೆ ನೋವಿನಲ್ಲೇ ಆಂಬುಲೆನ್ಸ್‌ಗಾಗಿ 3 ಕಿ.ಮೀ. ನಡೆದು ಹೋದ ಗರ್ಭಿಣಿ: ಮುಂದೆ ನಡೆದಿದ್ದು..

    ಪೆದಬಯಲು ಮಂಡಲ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಕೆಲವು ದೂರದ ಇನ್ನೂ ಸರಿಯಾದ ರಸ್ತೆ ಸೌಕರ್ಯವಿಲ್ಲ. ಕನಿಷ್ಠ ಆಟೊ, ದ್ವಿಚಕ್ರ ವಾಹನಗಳೂ ಹೋಗಲಾಗದ ಪರಿಸ್ಥಿತಿಯಿದೆ. ಆಂಬ್ಯುಲೆನ್ಸ್ ಬರಲು ದಾರಿ ಇಲ್ಲದೇ ಗರ್ಭಿಣಿಯೊಬ್ಬಳು ನೋವಿನಲ್ಲೇ ಮೂರು ಕಿಲೋಮೀಟರ್ ನಡೆದುಕೊಂಡು ಹೋಗಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪೆದಬಯಲು ಮಂಡಲದಲ್ಲಿ ನಡೆದಿದೆ.

    ಕುಂತೂರ್ಲಾ ಪಂಚಾಯತ್ ವ್ಯಾಪ್ತಿಯ ಲುಂಜರಿಪುಟ್ಟು ಗ್ರಾಮದ ಗರ್ಭಿಣಿ ಕಲಾವತಿ ಎಂಬ ಮಹಿಳೆಗೆ ಶನಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಕುಟುಂಬಸ್ಥರು 108ಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಗ್ರಾಮಕ್ಕೆ ಆಂಬ್ಯುಲೆನ್ಸ್ ಬರಲು ಮಾರ್ಗವಿಲ್ಲದ ಕಾರಣ ಮೂರು ಕಿ.ಮೀ ದೂರದಲ್ಲಿಯೇ ನಿಂತಿದ್ದು, ಕುಟುಂಬಸ್ಥರು ದಿಕ್ಕು ತೋಚದೆ ಆಕೆಯನ್ನು 3 ಕಿಲೋಮೀಟರ್‌ ನಡೆಸಿಕೊಂಡು ಹೋಗಿದ್ದಾರೆ.

    ಇದನ್ನೂ ಓದಿ: ಬಾಯ್​ಫ್ರೆಂಡ್ ನೆರವಿನಿಂದ ಗಂಡನನ್ನು ಮುಗಿಸಿದ ಪತ್ನಿ: 2 ವರ್ಷಗಳ ನಂತರ ಮಗಳಿಂದ ರಹಸ್ಯ ಬಯಲು

    ಆ ಬಳಿಕ ಆಕೆಯನ್ನು ಸ್ಟ್ರೆಚರ್‌ನಲ್ಲಿ ಹೊತ್ತುಕೊಂಡು ಆಂಬುಲೆನ್ಸ್​​ ಬಳಿ ಕರೆತರಲಾಗಿದೆ ಎಂದು ಹೇಳಲಾಗಿದ್ದು, ಆಕೆ ಬರುವಿಕೆಗಾಗಿ ಕಾಯುತ್ತಿದ್ದ ಆಂಬುಲೆನ್ಸ್​ ಸಿಬ್ಬಂದಿ ಕೂಡಲೇ ದೂರದಿಂದ ಗಮನಿಸಿ ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅದಾಗಲೇ ನೋವು ತೀವ್ರಗೊಂಡಿದ್ದರಿಂದ ಸಿಬ್ಬಂದಿ ಆಂಬ್ಯುಲೆನ್ಸ್​​ನಲ್ಲೇ ಆಕೆಗೆ ಹೆರಿಗೆ ಮಾಡಿಸಿದ್ದು, ಮಹಿಳೆಯು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

    ಆದರೆ, ರಕ್ತಸ್ರಾವದ ಕಾರಣ ತಾಯಿ ಮತ್ತು ಮಗುವನ್ನು ಆಂಬುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿದ್ದು, ತಪಾಸಣೆ ನಡೆಸಿದ ವೈದ್ಯರು ಆಕೆಯ ಆರೋಗ್ಯ ಸುಧಾರಿಸಿದ್ದು, ಮಗು ಕೂಡ ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts