More

    I.N.D.I.A. ಮೈತ್ರಿಕೂಟದ ಪರ ಪ್ರಧಾನಿ ಅಭ್ಯರ್ಥಿ ‘ಇವರೇ’ ಎಂದ ರಾಜಸ್ಥಾನ ಸಿಎಂ..!

    ದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಕಿತ್ತೊಗೆಯಲು ದೇಶದ ಬಹುತೇಕ ವಿರೋಧ ಪಕ್ಷಗಳು ತೀವ್ರ ಪ್ರಯತ್ನ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಪಕ್ಷದೊಂದಿಗೆ ಸೇರಿಕೊಂಡು I.N.D.I.A. ಒಕ್ಕೂಟವನ್ನು ರಚಿಸಿದ್ದವು.

    ಇದನ್ನೂ ಓದಿ: ಮಲಗಿದ್ದ ವೇಳೆ ಏಕಾಏಕಿ ಫ್ರಿಡ್ಜ್​​​ ಸ್ಫೋಟ: ಮಹಿಳೆಯ ಎದುರೇ ಸೊಸೆ, ಮಗಳ ಸಜೀವ ದಹನ..

    ಆದರೆ, ಈ ಮೈತ್ರಿಕೂಟ ರಚನೆಯಾದಾಗಿನಿಂದ ಎನ್‌ಡಿಎ ಮೈತ್ರಿಕೂಟವು ಇದನ್ನು ತೀವ್ರವಾಗಿ ಟೀಕಿಸುತ್ತಿದ್ದು, ಇಷ್ಟು ಪಕ್ಷದ ನಾಯಕರಿರುವ ಈ ಮೈತ್ರಿಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. ಆದರೆ ಈ ಮೈತ್ರಿಕೂಟದ ಪರವಾಗಿ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ. ಮೈತ್ರಿಕೂಟವೂ ಇದಕ್ಕೆ ಒಪ್ಪಿಗೆ ನೀಡಿದೆ ಎಂದು ರಾಜಸ್ಥಾನ ಸಿಎಂ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

    202ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇತ್ತೀಚೆಗೆ ಬಹಿರಂಗಪಡಿಸಿದ್ದು, ಈ ಬಗ್ಗೆ ಮೈತ್ರಿಕೂಟದಲ್ಲಿ ಚರ್ಚೆ ನಡೆದಿದೆ. ರಾಹುಲ್ ಪ್ರಧಾನಿ ಅಭ್ಯರ್ಥಿಯಾಗುವುದನ್ನು ಎಲ್ಲಾ ಪಕ್ಷಗಳು ಒಪ್ಪಿಕೊಂಡಿವೆ ಎಂದಿದ್ದಾರೆ.

    ಈ ಸಂದರ್ಭದಲ್ಲಿ ಅಶೋಕ್ ಗೆಹ್ಲೋಟ್ ಕೇಂದ್ರದ ಆಡಳಿತಾರೂಢ ನರೇಂದ್ರ ಮೋದಿ ಸರಕಾರವನ್ನು ತೀವ್ರವಾಗಿ ಟೀಕಿಸಿದರು. ಪ್ರತಿ ಚುನಾವಣೆಯಲ್ಲೂ ಸ್ಥಳೀಯ ಸಮಸ್ಯೆಗಳು ಇದ್ದೇ ಇರುತ್ತವೆ. ಸದ್ಯ ಆ ಕ್ಷೇತ್ರಗಳ ವಿಶೇಷ ಪರಿಸ್ಥಿತಿಗಳು ದೇಶದ ಎಲ್ಲ ಪಕ್ಷಗಳ ಮೇಲೆ ಒತ್ತಡ ಹೇರಿದ್ದು, ಅದರ ಫಲವಾಗಿ I.N.D.I.A ಮೈತ್ರಿ ಏರ್ಪಟ್ಟಿದೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಬಾಯ್​ಫ್ರೆಂಡ್ ನೆರವಿನಿಂದ ಗಂಡನನ್ನು ಮುಗಿಸಿದ ಪತ್ನಿ: 2 ವರ್ಷಗಳ ನಂತರ ಮಗಳಿಂದ ರಹಸ್ಯ ಬಯಲು

    2014ರಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ತೀವ್ರ ದುರಹಂಕಾರ ತೋರಿದ್ದಾರೆ. ದೇಶದ ಶೇ.31ರಷ್ಟು ಮತದಾರರ ಬೆಂಬಲದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಉಳಿದ ಶೇ.69ರಷ್ಟು ಜನರು ಎನ್​​ಡಿಎ ಸರ್ಕಾರದ ವಿರುದ್ಧ ಇದ್ದಾರೆ ಎಂದು ಅಶೋಕ್ ಗೆಹ್ಲೋಟ್ ವಾಗ್ದಾಳಿ ನಡೆಸಿದ್ದಾರೆ.

    ಶೇ 50ರಷ್ಟು ಮತ ಪಡೆದು ಮತ್ತೊಮ್ಮೆ ಸರ್ಕಾರ ರಚಿಸುತ್ತೇನೆ ಎಂದು ಎನ್​ಡಿಎ ಹೇಳಿದೆ. ಅದು ಎಂದಿಗೂ ಆಗುವುದಿಲ್ಲ. ಮೋದಿ ಜನಪ್ರಿಯರಾಗಿದ್ದಾಗ ಶೇ.50ರಷ್ಟು ಮತಗಳನ್ನು ಪಡೆದಿರಲಿಲ್ಲ. ಅಂಥದ್ದರಲ್ಲಿ ಈಗ ದೇಶದ ಜನರಲ್ಲಿ ಮೋದಿ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದೆ. ಈಗ ಅದು ಸಾಧ್ಯವಿಲ್ಲ. ಪ್ರಧಾನಿಯವರು ನೀಡಿದ ಭರವಸೆಗಳಲ್ಲಿ ಇದುವರೆಗೆ ಎಷ್ಟು ಜಾರಿಯಾಗಿದೆ ಎಂಬುದು ದೇಶದ ಜನತೆಗೆ ಗೊತ್ತಿದೆ ಎಂದು ಗೆಹ್ಲೋಟ್ ಟೀಕಿಸಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts