More

    VIDEO| ಚಲಿಸುವ ಮೆಟ್ರೋದಲ್ಲಿ ಫ್ಯಾಷನ್​ ಶೋ; ವಿಭಿನ್ನ ಪ್ರಯತ್ನಕ್ಕೆ ನಿಬ್ಬೆರಗಾದ ನೆಟ್ಟಿಗರು

    ನಾಗ್ಪುರ: ಸದಾ ಗಲಾಟೆ, ಪ್ರೇಮಿಗಳ ಪ್ರಣಯ ಪ್ರಸಂಗಕ್ಕೆ ಹೆಚ್ಚು ಸಾಕ್ಷಿಯಾಗುತ್ತಿದ್ದ ಮೆಟ್ರೋ ಪ್ರಯಾಣಿಕರು ಈಗ ಹೊಸದೊಂದು ಪ್ರಯತ್ನವನ್ನು ಕಂಡು ನಿಬ್ಬೆರಗಾಗಿದ್ದಾರೆ. ಆದರೆ, ಈ ಬಾರಿ ಇದು ನಡೆದಿರುವುದು ದೆಹಲಿಯಲ್ಲಿ ಅಲ್ಲ ಬದಲಿಗೆ ನಾಗ್ಪುರದಲ್ಲಿ.

    ದೆಹಲಿ ಮೆಟ್ರೋದಲ್ಲಿ ನಡೆಯುವ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿತ್ತು. ಆದರೆ, ಈ ಬಾರಿ ನಾಗ್ಪುರ ಮೆಟ್ರೋ ದೇಶದ ಜನತೆಯೆ ಗಮನ ಸೆಳೆದಿದ್ದು, ಈಗೂ ಮಾಡಬಹುದೇ ಎಂದು ಹಲವರು ನಿಬ್ಬೆರಗಾಗಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.

    ಫ್ಯಾಷನ್​ ಶೋ

    ಭಾನುವಾರ (ಆಗಸ್ಟ್​ 28)ರಂದು ಜನನಿಬಿಡ ಮೆಟ್ರೋ ರೈಲಿನಲ್ಲಿ ಫ್ಯಾಷನ್​ ಶೋ ಒಂದನ್ನು ಆಯೋಜಿಸಲಾಗಿತ್ತು. ತೀವ್ರ ಜನಸಂದಣಿಯಿದ್ದ ರೈಲಿನಲ್ಲಿ ಮಾಡೆಲ್​ಗಳು ಹೆಜ್ಜೆ ಹಾಕುತ್ತಿರುವುದನ್ನು ಕಂಡು ಅಲ್ಲಿದ್ದ ಪ್ರಯಾಣಿಕರು ಒಂದು ಕ್ಷಣಕ್ಕೆ ಆಶ್ವರ್ಯಚಕಿತರಾದರು.

    ಇದನ್ನೂ ಓದಿ: VIDEO| ಭೂಮಿ ತಿರುಗುವುದಿಲ್ಲ ಸ್ಥಿರವಾಗಿರುತ್ತದೆ ಎಂದ ಪಾಕ್​ ಪ್ರಜೆ; ಕಾರಣ ಕೇಳಿ ನಕ್ಕು ನಕ್ಕು ಸುಸ್ತಾದ ನೆಟ್ಟಿಗರು

    ಸಂಸ್ಕೃತಿ ಹಾಗೂ ಪರಂಪರೆಯ ಮಹತ್ವವನ್ನು ಜನರಿಗೆ ತಿಳಿಸಲು ಈ ಫ್ಯಾಷನ್​ ಶೋ ಆಯೋಜಿಸಲಾಗಿತ್ತು. ಶೋನಲ್ಲಿ 2 ವರ್ಷದಿಂದ ಹಿಡಿದು 50 ವರ್ಷದವರು ಭಾಗಿಯಾಗಿದ್ದರು. ಪ್ರತಿಷ್ಠಿತ ಫ್ಯಾಷನ್​ ಡಿಸೈನರ್​ಗಳು ಶೋಗಾಗಿ ವಸ್ತ್ರವಿನ್ಯಾಸ ಮಾಡಿದ್ದಾರೆ. ಉದಯೋನ್ಮುಖ ಪ್ರತಿಭೆಗಳು ಚಲಿಸುವ ರೈಲಿನಲ್ಲಿ ಹೆಜ್ಜೆ ಹಾಕುವ ಮೂಲಕ ಸಂಸ್ಕೃತಿ ಹಾಗೂ ಪರಂಪರೆಯ ಮಹತ್ವವನ್ನು ಜನತೆಗೆ ತಿಳಿಸಿರುವುದಾಗಿ ಆಯೋಜಕರು ಹೇಳಿದ್ದಾರೆ.

    ನಾಗ್ಪುರ ಮೆಟ್ರೋ ಸೆಲಬ್ರೇಷನ್​ ಆನ್​ ವೀಲ್​ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದೆ. ಈ ಯೋಜನೆ ಅಡಿ ವಿವಿಧ ಸಂಘ-ಸಂಸ್ಥೆಗಳು ಮೆಟ್ರೋ ಸಂಸ್ಥೆಗೆ ಶುಲ್ಕವನ್ನು ಪಾವತಿಸಿ ರೈಲಿನೊಳಗಡೆ ಕಾರ್ಯಕ್ರಮವನ್ನು ಆಯೋಜನೆ ಮಾಡಬಹುದಾಗಿದೆ. 2020ರಲ್ಲಿ ನಾಗ್ಪುರ ಮೆಟ್ರೋ ರೈಲಿನಲ್ಲಿ ಫ್ಯಾಷನ್​ ಶೋ ಆಯೋಜಿಸುವ ಮೂಲಕ ಸುದ್ದಿಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts