ಫ್ಯಾಷನ್​ ಡಿಸೈನರ್ ಅಂಗಸೌಷ್ಠವಕ್ಕೆ ಫಿದಾ ಆದ ನೆಟ್ಟಿಗರು; ಈಕೆಯ ವಯಸ್ಸೆಷ್ಟು ಗೊತ್ತಾ?

vw 1
Published on

ನವದೆಹಲಿ: ವಯಸ್ಸಾದಂತೆ ಮಾಗುವುದಷ್ಟೇ ಅಲ್ಲ, ಸೌಂದರ್ಯ ಮಾಸುವುದು ಕೂಡ ಸಹಜ. ಆದರೆ ಇಲ್ಲೊಬ್ಬಳು ಫ್ಯಾಷನ್​ ಡಿಸೈನರ್​ ವಯಸ್ಸಾದರೂ ಡಲ್​ ಆಗದೆ ಅದೇ ಚಾರ್ಮ್​ ಉಳಿಸಿಕೊಂಡಿದ್ದು, ತನ್ನ ಬರ್ತ್​ಡೇ ಸಂದರ್ಭದಲ್ಲಿ ನೆಟ್ಟಿಗರ ಗಮನ ಸೆಳೆದಿದ್ದಷ್ಟೇ ಅಲ್ಲದೆ, ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಕೆಲವೇ ದಿನಗಳ ಹಿಂದಷ್ಟೇ ತನ್ನ ಜನ್ಮದಿನವನ್ನು ಆಚರಿಸಿಕೊಂಡಿರುವ ಈಕೆ ಅದರ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಸಂಭ್ರಮದ ಕ್ಷಣಗಳನ್ನೆಲ್ಲ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದು ಪೋಸ್ಟ್ ಮಾಡಿಕೊಂಡಿರುವ ಈಕೆ, ಆ ಮೂಲಕ ಹಲವರ ಕಣ್ಮನ ಸೆಳೆದಿದ್ದಾರೆ.

ಅಮೆರಿಕದ ಫ್ಯಾಷನ್ ಡಿಸೈನರ್ ಆಗಿರುವ ಈಕೆಯ ಹೆಸರು ವೆರಾ ವ್ಯಾಂಗ್. ಈಕೆ ತನ್ನ 72ನೇ ಜನ್ಮದಿನಾಚರಣೆಯ ಫೋಟೋಗಳನ್ನು ಎರಡು ದಿನಗಳ ಹಿಂದೆ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ತುಂಬಾ ಯಂಗ್ ಆಗಿದ್ದೀರಿ, ವಯಸ್ಸು ಎಪ್ಪತ್ತೆರಡಾದರೂ 25ರ ಹಾಗೆ ಕಾಣಿಸುತ್ತಿದ್ದೀರಿ ಎಂದೆಲ್ಲ ನೆಟ್ಟಿಗರು ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net