969 ಕೆಜಿ ದೈತ್ಯ ಕುಂಬಳಕಾಯಿ ಬೆಳೆದು ದಾಖಲೆ ನಿರ್ಮಿಸಿದ ರೈತ| russia

pumpkin
Published on

ರಷ್ಯಾ; ರೈತನೊಬ್ಬ ಅತ್ಯಂತ ಭಾರವಾದ ಕುಂಬಳಕಾಯಿಯನ್ನು ಬೆಳೆಸುವ ಮೂಲಕ ತನ್ನದೇ ಆದ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದಾನೆ. ರಷ್ಯಾದ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಕುಂಬಳಕಾಯಿ ದಾಖಲಾಗಿರುವುದು ಗಮನಾರ್ಹ.

ಮಾಸ್ಕೋದ ಅಪೋಥೆಕರಿ ಗಾರ್ಡನ್‌ನಲ್ಲಿ ಭಾರಿ ತರಕಾರಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ 144 ಕೆಜಿ ಕಲ್ಲಂಗಡಿ ಮತ್ತು 73 ಕೆಜಿ ಸೌತೆಕಾಯಿಯನ್ನು ಒಳಗೊಂಡ ಬೃಹತ್ ತರಕಾರಿ ಸ್ಪರ್ಧೆಯಲ್ಲಿ ರಷ್ಯಾದ ರೈತ ಅಲೆಕ್ಸಾಂಡರ್ ಚುಸೊವ್ 969 ಕೆಜಿ ಕುಂಬಳಕಾಯಿಯನ್ನು ಪ್ರದರ್ಶಿಸಿ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.

ಇನ್ನೂ ಕುಂಬಳಕಾಯಿ ಗಾತ್ರದ ಬಗ್ಗೆ ಮಾತನಾಡಿದ ಅಲೆಕ್ಸಾಂಡರ್ ಚುಸೊವ್, ಈ ಬೃಹತ್ ಕುಂಬಳಕಾಯಿಯನ್ನು ಬೆಳೆಸಲು ಆರು ತಿಂಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದ್ದಾಗಿ ಹೇಳಿದರು. ಕುಂಬಳಕಾಯಿ ಬೆಳವಣಿಗೆಗೆ ಸರಿಯಾದ ವಾತಾವರಣವನ್ನು ಸೃಷ್ಟಿಸಲು ಅವರು ಹಸಿರುಮನೆ ನಿರ್ಮಿಸಲಾಗಿದೆ. ಇದು ವೈಜ್ಞಾನಿಕ ಕಾಳಜಿ ಮತ್ತು ನಿಖರತೆಯ ಫಲಿತಾಂಶ ಎಂದು ಹೇಳಿದರು.

(ಏಜೆನ್ಸೀಸ್)

ಸರಿಯಾದ ಬೀಜಗಳಿಂದ ಇದನ್ನು ಬಿತ್ತನೆ ಮಾಡಿ ಇದರ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಪ್ರತಿದಿನ ಸರಿಯಾದ ಪ್ರಮಾಣದ ನೀರನ್ನು ಒದಗಿಸಿ, ಮಣ್ಣನ್ನು ಸೂಕ್ತ ಪ್ರಮಾಣದಲ್ಲಿ ಪೋಷಣೆ ಮಾಡಿ, ಇದನ್ನು ಬೆಳೆಯಲಾಗುತ್ತದೆ ಎಂದರು. ಈ ಬೃಹತ್ ಕುಂಬಳಕಾಯಿ ರಷ್ಯಾದ ದೈತ್ಯ ತರಕಾರಿ ಬೆಳೆಯುವ ಸ್ಪರ್ಧೆಯ ಪ್ರಮುಖ ಅಂಶವಾಗಿತ್ತು. ಈ ಸ್ಪರ್ಧೆಯಲ್ಲಿ ದೇಶಾದ್ಯಂತ 3,000 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಪ್ರತಿಯೊಬ್ಬ ರೈತರು ತಮ್ಮ ತರಕಾರಿಗಳನ್ನು ವಿಶಿಷ್ಟ ರೀತಿಯಲ್ಲಿ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net