

Pizza: ಶಿಶು ಪಾಲನ ಕೇಂದ್ರದ ಮಕ್ಕಳಿಗೆ ಪಿಜ್ಜಾ ಮತ್ತು ಮಜ್ಜಿಗೆ ವಿತರಿಸಬೇಕೇಂದು ಸಾಕು ನಾಯಿ ವಿಚಾರಕ್ಕೆ ಜಗಳವಾಡಿ ಕೋರ್ಟ್ ಮೆಟ್ಟಿಲೇರಿದ್ದ ಇಬ್ಬರಿಗೆ ದೆಹಲಿ ಹೈಕೋರ್ಟ್ ಮಂಗಳವಾರ (ಸೆ.23) ಆದೇಶಿಸಿದೆ.
ದೆಹಲಿಯ ಜಿಟಿಬಿ ಆಸ್ಪತ್ರೆ ಬಳಿಯಿರುವ ಸಂಸ್ಕಾರ ಆಶ್ರಮದಲ್ಲಿನ ಮಕ್ಕಳಿಗೆ ಅಮುಲ್ 'ಚಾಚ್' ಟೆಟ್ರಾ ಪ್ಯಾಕ್‌ಗಳು ಮತ್ತು ಮಿಶ್ರ ತರಕಾರಿ ಪಿಜ್ಜಾಗಳನ್ನು ಬಡಿಸಿದರೆ ನೆರೆಹೊರೆಯವರ ಇಬ್ಬರ ಪೊಲೀಸ್ ಪ್ರಕರಣಗಳು ರದ್ದಾಗುತ್ತವೆ ಎಂದು ನ್ಯಾಯಾಮೂರ್ತಿ ಅರುಣ್ ಮೋಂಗಾ ಪೀಠ ಹೇಳಿದೆ ಎಂದು ಬಾರ್ ಆ್ಯಂಡ್ ಬೆಂಜ್ ವರದಿ ಮಾಡಿದೆ.
ಪಿಜ್ಜಾಗಳನ್ನು ಒಬ್ಬ ದೂರುದಾರರು ತಯಾರು ಮಾಡುತ್ತಾರೆ. ಅದನ್ನು ಮತ್ತೊಬ್ಬ ದೂರುದಾರ ಜಂಟಿಯಾಗಿ ಬಡಿಸಬೇಕು. ಇದು ಸಮುದಾಯ ಸೇವೆ ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಈ ಗಲಾಟೆ ನೆರೆಹೊರೆಯವರ ಖಾಸಗಿ ವಿಷಯವಾಗಿದ್ದು, ಪರಸ್ಪರರ ವಿರುದ್ಧದ ಕ್ರಿಮಿನಲ್ ಪ್ರಕರಣಗಳು ಮುಂದುವರೆಯುವುದು ಒಳ್ಳೆಯದಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇನ್ನು ಈ ಘಟನೆ ಮೇ 5 ರಂದು ನಡೆದಿದ್ದು, ಸಾಕುಪ್ರಾಣಿಗಳನ್ನು ನಿರ್ವಹಿಸುವ ವಿಚಾರದಲ್ಲಿ ಇಬ್ಬರು ನೆರೆಹೊರೆಯವರ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಜಗಳವಾಗಿ ಮಾರ್ಪಟ್ಟಿದೆ. ಮಾನಸ ಸರೋವರ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಬೆದರಿಕೆ ಅನ್ವಯಿಸಿ ಇಬ್ಬರ ಮೇಲೆ ಎಫ್‌ಐಆರ್‌ಗಳನ್ನು ದಾಖಲಿಸಿವೆ.(ಏಜೆನ್ಸೀಸ್)