ಶಿವಪುರದಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ

sanmana
Published on

ಹೆಬ್ರಿ: ತಾಲೂಕಿನ ಶಿವಪುರ ಗ್ರಾಮದಲ್ಲಿ 2ನೇ ಹಂತದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಶುಕ್ರವಾರ ನಡೆಯಿತು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಡಾ.ಧನಂಜಯ್ ರೈತರನ್ನು ಉದ್ದೇಶಿಸಿ ಕೃಷಿಯಲ್ಲಿ ಅಗತ್ಯತೆಗೆ ಅನುಗುಣವಾಗಿ ರಸಗೊಬ್ಬರ ಬಳಸಬೇಕು. ಹಾನಿಕಾರಕ ಕೀಟಗಳು, ಉತ್ತಮ ಬೆಳೆಗೆ ಸಹಾಯ ಮಾಡುವ ಕೀಟಗಳು ಇರುತ್ತದೆ. ಹುಲ್ಲಿನ ಬಣ್ಣ ಆಧರಿಸಿ ಗೊಬ್ಬರ ನೀಡುವುದು ಉತ್ತಮ, ಕಾಲಕಾಲಕ್ಕೆ ಕಳೆ ಗಿಡಗಳ ನಿಯಂತ್ರಣ ಮಾಡಬೇಕು ಎಂದರು.

ಮಹಿಳಾ ದೌರ್ಜನ್ಯ ಹಾಗೂ ಲಿಂಗತ್ವ ತಾರತಮ್ಯದ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ದೆಹಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾದ ಕೃಷಿ ಸಖಿ ಸುಗಂಧಿ ಅವರನ್ನು ಸನ್ಮಾನಿಸಲಾಯಿತು. ಪಿಡಿಒ ಅಶೋಕ್, ಕೃಷಿ ಅಧಿಕಾರಿ ಸಿದ್ದಪ್ಪ, ಗ್ರಾಪಂ ಅಧ್ಯಕ್ಷೆ ಶೋಭಾ ಶೆಟ್ಟಿ, ಸಂಜೀವಿನಿ ತಾಲೂಕು ಮಟ್ಟದ ಅಧ್ಯಕ್ಷೆ ಸುಜಾತಾ, ಟಿಪಿಎಂಗಳಾದ ಬಬಿತಾ, ಉಮಾ, ಶಿವಪುರ, ಶಿವದುರ್ಗೆ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಗೀತಾ ವಿ.ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net