ವಿದ್ಯುತ್ ತಂತಿ ಸ್ಪರ್ಶಿಸಿ ಕೃಷಿಕ, ದನ ಸಾವು

Death Case
Published on

ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ಸ್ಪರ್ಶಿಸಿ ಕೃಷಿಕ ಚೆವ್ನಾಡ್ ಪಂಚಾಯಿತಿಯ ಕೋಳಿಯಡ್ಕ ಮೇಲತ್ ಕುಞಿಕುಂಡನ್ ನಾಯರ್ ಯಾನೆ ಕುಞೌಂಡನ್ ನಾಯರ್(84) ಎಂಬುವರು ಮೃತಪಟ್ಟಿದ್ದಾರೆ. ಅವರು ಮೇಯಿಸಲು ಕರೆದೊಯ್ದಿದ್ದ ದನವೂ ವಿದ್ಯುತ್ ಶಾಕ್ ತಗುಲಿ ಸಾವಿಗೀಡಾಗಿದೆ.

ಮನೆಯಿಂದ 100 ಮೀ. ದೂರದಲ್ಲಿರುವ ಹುಲ್ಲುಗಾವಲಿಗೆ ದನವನ್ನು ಮೇಯಿಸಲು ಕೊಂಡೊಯ್ದಿದ್ದು, ಬಹಳ ಹೊತ್ತಿನವರೆಗೂ ವಾಪಸಾಗದಿರುವುದರಿಂದ ಅವರ ಪುತ್ರ ರಾಜೇಶ್ ಅತ್ತ ತೆರಳಿ ನೋಡಿದಾಗ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದಲ್ಲದೆ, ತಂದೆ ಹಾಗೂ ದನ ಸ್ಥಳದಲ್ಲಿ ಬಿದ್ದಿರುವುದು ಕಂಡುಬಂದಿತ್ತು. ವಿದ್ಯುತ್ ಪ್ರವಹಿಸುತ್ತಿದ್ದ ಹಿನ್ನೆಲೆಯಲ್ಲಿ ಅತ್ತ ತೆರಳದೆ, ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿ ಸಂಪರ್ಕ ಕಡಿತಗೊಂಡ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಮೇಲ್ಪರಂಬ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net