ಕುತೂಹಲದಿಂದ ಓದು, ಸಾಧನೆ ಸುಲಭ : ಡಾ.ಅನಂತ ಪ್ರಭು ಪ್ರತಿಪಾದನೆ

New Project (9)
Published on

ಗುರುಪುರ: ಅಡ್ಡೂರಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಮತ್ತು ಸಹರಾ ಆಂಗ್ಲ ಮಾಧ್ಯಮ ಶಾಲೆ ಜಂಟಿ ಆಶ್ರಯದಲ್ಲಿ ಶನಿವಾರ ಶಾಲೆಯ ರಕ್ಷಕ-ಶಿಕ್ಷಕ ಅಸೋಸಿಯೇಶನ್‌ನ(ಪಿಟಿಎ) ಪದಾಧಿಕಾರಿಗಳ ಆಯ್ಕೆ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ.ಅನಂತ ಪ್ರಭು ಗುರುಪುರ ಮಾತನಾಡಿ, ಸಮಸ್ಯೆಗಳಿಗೆ ಪರಿಹಾರ ಇದ್ದೇ ಇದೆ. ವಿದ್ಯಾರ್ಥಿಗಳು ಅದನ್ನು ಭೇದಿಸುವ ಛಲ ಮತ್ತು ಧೈರ್ಯ ತೋರಿಸಬೇಕು. ಆಧುನಿಕ ಯುಗಕ್ಕೆ ಸಂಬಂಧಿಸಿದ ಶಿಕ್ಷಣ ನೀತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಕುತೂಹಲ ಅಗತ್ಯ. ಆಗಲೇ ಓದು ಮತ್ತು ಸಾಧನೆ ಸುಲಭವಾಗುತ್ತದೆ ಎಂದರು.

ಕನ್ನಡ ಉಪನ್ಯಾಸಕ ಹಾಗೂ ಲೇಖಕ ಟಿ.ಎ.ಎನ್.ಖಂಡಿಗೆ ಮಾತನಾಡಿ, ಶಿಸ್ತು ಅಂತರಂಗದಲ್ಲಿ ಜಾಗೃತವಾಗುತ್ತದೆ. ಪಾಲಕರಿಂದ ಮಕ್ಕಳಿಗೆ ಶಿಸ್ತು ಬರುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಗಳನ್ನು ಅಭಿನಂದಿಸಲಾಯಿತು. ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಯು.ಪಿ.ಇಬ್ರಾಹಿಂ, ಸಹರಾ ಶಿಕ್ಷಣ ಸಂಸ್ಥೆಯ ಸಂಚಾಲಕ ಎ.ಕೆ.ಇಸ್ಮಾಯಿಲ್, ಎಂಡಬ್ಲುೃಎ ಗೌರವಾಧ್ಯಕ್ಷ ಹಾಜಿ ಎಂ.ಎಚ್.ಮೈಯೆದ್ದಿ, ಪಿಟಿಎ ಅಧ್ಯಕ್ಷ ವಿಶ್ವಾಂಭರ, ಶಾಲಾ ಪ್ರಾಂಶುಪಾಲ ಕೇಶವ ಎಚ್, ಎಂಡಬ್ಲುೃಎ ಉಪಾಧ್ಯಕ್ಷ ಎನ್.ಇ.ಮೊಹಮ್ಮದ್, ಅಹಮ್ಮದ್ ಬಾವ ಅಂಗಡಿಮನೆ, ಎಂಡಬ್ಲುೃಎ ಜತೆ ಕಾರ್ಯದರ್ಶಿ ನೂರುಲ್ಲ ಅಮೀನ್, ಎಂಡಬ್ಲುೃಎ ಖಜಾಂಚಿ ಎ.ಕೆ.ಅಶ್ರಫ್, ಪಿಟಿಎ ಉಪಾಧ್ಯಕ್ಷೆ ಪ್ರಮೀಳಾ ಡಿ.ಮಾರ್ಲ, ಉಪ-ಪ್ರಾಂಶುಪಾಲ ದೇವಿಪ್ರಸಾದ್, ಎಂಡಬ್ಲುೃಎ ಸದಸ್ಯರಾದ ಹಸನ್ ಬಾವ, ಎ.ಕೆ.ಮೊಹಮ್ಮದ್, ಅಬ್ದುಲ್ ಅಝೀಝ್, ಎ.ಜಿ.ಅಬ್ದುಲ್ ಖಾದರ್, ಸಮಾಜಸೇವಕ ಮೊಜಾಂಬಿಲ್ ಮತ್ತಿತರರು ಇದ್ದರು.

ಪ್ರಾಂಶುಪಾಲ ಕೇಶವ್ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ದಿಲ್ಪಾಸೀನ್ ಸ್ವಾಗತಿಸಿದರು. ಶಿಕ್ಷಕಿಯರಾದ ಅಶ್ರಫುನ್ನೀಸಾ ಹಾಗೂ ಹೇಮಾಶ್ರೀ ನಿರೂಪಿಸಿದರು. ಶಿಕ್ಷಕಿ ಮಂಜವ್ವ ವಂದಿಸಿದರು. ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಹರಾ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಅಸೋಸಿಯೇಶನ್‌ಗೆ ಅಧ್ಯಕ್ಷರಾಗಿ ವಿಶ್ವಾಂಭರ ಹಾಗೂ ಉಪಾಧ್ಯಕ್ಷರಾಗಿ ಪ್ರಮೀಳಾ ಡಿ.ಮಾರ್ಲ ಬಹುಮತದಿಂದ ಪುನರಾಯ್ಕೆಯಾದರು. ಮತ್ತೋರ್ವ ಉಪಾಧ್ಯಕ್ಷರಾಗಿ ಸದಕತ್ತುಲ್ಲ ಆಯ್ಕೆಯಾದರು.

ಮೊಬೈಲ್ ಬಳಕೆ ಬಗ್ಗೆ ಎಚ್ಚರ ವಹಿಸಬೇಕು. ಹೊಸ ಕಾನೂನಿನ ಪ್ರಕಾರ, ಸಾಮಾಜಿಕ ಜಾಲತಾಣಗಳಲ್ಲಿ ಅನುಚಿತ ಸಂದೇಶ ಕಳುಹಿಸುವ ವ್ಯಕ್ತಿಯಲ್ಲದೆ, ಅದನ್ನು ಫಾರ್ವರ್ಡ್ ಮಾಡಿದವರೂ ಅಪರಾಧಿಗಳಾಗುತ್ತಾರೆ. ಅಪರಾಧಿಗಳಿಗೆ 3 ವರ್ಷ ಜೈಲು ಶಿಕ್ಷೆ ತಪ್ಪಿದ್ದಲ್ಲ. ಮೊಬೈಲ್‌ನಲ್ಲಿ ಪೋಟೊ ಲೋಡ್ ಮಾಡುವಾಗ ಎಚ್ಚರವಹಿಸಿ. ಪ್ರತಿದಿನವೂ ಹೊಸ ಹೊಸ ಸೈಬರ್ ಸ್ಕಾೃಮ್ ನಡೆಯುತ್ತದೆ. ನಿಮ್ಮ ಮೊಬೈಲ್ ಅಪರಿಚಿತರಿಗೆ ಕೊಡಬೇಡಿ. ಡಾ.ಅನಂತ ಪ್ರಭು ಗುರುಪುರ, ಉಪನ್ಯಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net