ಸಂಚಾರ ನಿಯಂತ್ರಕರಿಗೆ ಬೀಳ್ಕೊಡುಗೆ

New Project (6)
Published on

ಸುಬ್ರಹ್ಮಣ್ಯ: ಕೆಎಸ್‌ಆರ್‌ಟಿಸಿ ಇಲಾಖೆಯ ಸುಬ್ರಹ್ಮಣ್ಯ ಬಸ್‌ನಿಲ್ದಾಣದಲ್ಲಿ ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವೇಣುಗೋಪಾಲ ಕೈಕಂಬ ಅವರಿಗೆ ಸುಬ್ರಹ್ಮಣ್ಯದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಹಲವಾರು ವರ್ಷಗಳಿಂದ ಕೆಎಸ್‌ಆರ್‌ಟಿಸಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಡಿಟಿಒ ಮುರಳೀಧರ್, ತೇಜಾಕ್ಷಿ ವೇಣುಗೋಪಾಲ್, ಕಲಾವಿದ ಕೆ.ಯಜ್ಞೇಶ್ ಆಚಾರ್, ಗ್ರಾಪಂ ಸದಸ್ಯ ಹರೀಶ್ ಎಸ್.ಇಂಜಾಡಿ, ಮಾಜಿ ಉಪಾಧ್ಯಕ್ಷ ಶಿವರಾಮ ರೈ, ಮಾಜಿ ಸದಸ್ಯರಾದ ಕಿಶೋರ್ ಅರಂಪಾಡಿ, ಕೃಷ್ಣಮೂರ್ತಿ ಭಟ್, ನಿವೃತ್ತ ಸಂಚಾರ ನಿಯಂತ್ರಕ ಸುಬ್ರಹ್ಮಣ್ಯ ಭಟ್ ಅಗ್ರಹಾರ, ಕುಕ್ಕೆ ದೇವಳದ ಕೆ.ಎಂ.ಗೋಪಿನಾಥ್ ನಂಬೀಶ, ಕೆಎಸ್ಸಾರ್ಟಿಸಿ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net