ಬೆಳ್ವೆ: ಅಲ್ಬಾಡಿ ಮೂರುಕೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 26 ವರ್ಷ ಶಿಕ್ಷಕಿಯಾಗಿ ಕರ್ತವ್ಯ ಸಲ್ಲಿಸಿ ಹೆಂಗವಳ್ಳಿಯ ಮರೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡ ಸಹ ಶಿಕ್ಷಕಿ ಸರಸ್ವತಿಗೆ ಬೀಳ್ಕೊಡುಗೆ ಸಮಾರಂಭ ಶನಿವಾರ ನಡೆಯಿತು.
ಹಳೇ ವಿದ್ಯಾರ್ಥಿ ಸಂಘ ಗೌರವಾಧ್ಯಕ್ಷ ಎ.ವಸಂತಕುಮಾರ್ ಶೆಟ್ಟಿ, ಕೋಶಾಧಿಕಾರಿ ರೋಹಿಣಿ ಉದಯಕುಮಾರ್ ಪೂಜಾರಿ, ಮಮತಾ, ದಿನಕರ ಶೆಟ್ಟಿ ಗುಡ್ಡಿಮನೆ, ಗಣೇಶ್ ಬೆಳ್ವೆ, ಜಯರಾಮ ಶೆಟ್ಟಿ ಗುಡ್ಡಿಮನೆ, ಸಂತೋಷ ಪೂಜಾರಿ ಅಲ್ಬಾಡಿ, ಬೆಳ್ವೆ ಗ್ರಾಪಂ ಸದಸ್ಯ ಕರುಣಾಕರ ಶೆಟ್ಟಿ, ಕುಂದಾಪುರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷೆ ಸುಜಾತ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಆನಂದ ಪೂಜಾರಿ ಅಲ್ಬಾಡಿ, ಉಪಾಧ್ಯಕ್ಷೆ ಪಾರ್ವತಿ ಅಲ್ಬಾಡಿ, ಮಡಾಮಕ್ಕಿ ಪಶ್ಚಿಮ ಮಾಂಡಿಮೂರುಕೈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಂ.ವಿಜಯಕುಮಾರ್ ಹೆಗ್ಡೆ, ಆರ್ಡಿ ಶಾಲೆ ಸಹಶಿಕ್ಷಕಿ ಪ್ರೇಮಾವತಿ, ಅಲ್ಬಾಡಿ ಮೂರುಕೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಹೆರಿಯಣ್ಣ ನಾಯ್ಕ, ಸಹ ಶಿಕ್ಷಕ ವೃಂದ ಉಪಸ್ಥಿತರಿದ್ದರು.