ಸುಳ್ಯ: ಸುಳ್ಯದ ನ್ಯಾಯಾಲಯದ ಅಟೆಂಡರ್ ಆಗಿದ್ದ ರಾಮಣ್ಣ ಗೌಡರು ಮೇ ೩೧ರಂದು ಸೇವಾ ನಿವೃತ್ತಿ ಹೊಂದಿದ್ದು, ನ್ಯಾಯಾಲಯದ ಸಭಾಂಗಣದಲ್ಲಿ ಅವರನ್ನು ಬೀಳ್ಕೊಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಬಿ.ಮೋಹನ್ ಬಾಬು ಅವರು, ನಿವೃತ್ತರಾದ ರಾಮಣ್ಣ ಗೌಡ ಹಾಗೂ ಅವರ ಪತ್ನಿ ದಮಯಂತಿ ಅವರನ್ನು ಸನ್ಮಾನಿಸಿದರು.
ಕಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಅರ್ಪಿತಾ ರಾಮಣ್ಣ ಎಲ್ಲರಿಗೆ ಗೌರವ ಕೊಡುವ ರೀತಿ ಹಾಗೂ ಅವರ ಸೇವೆ ಶ್ಲಾಘಿಸಿದರು. ಹಿರಿಯ ಮತ್ತು ಕಿರಿಯ ಸಹಾಯಕ ಸರ್ಕಾರಿ ಅಭಿಯೋಕ ರಮೇಶ್ ಆರ್.ಮತ್ತು ಆರೋನ್ ಡಿ.ಸೋಜ, ಕಿರಿಯ ವಿಭಾಗದ ಶಿರಸ್ತೇದಾರ ಶಶಿಕಲಾ ಎಚ್.ಎಸ್., ಸಿಬ್ಬಂದಿ ವಿಜಯ ಕುಮಾರಿ ಅನಿಸಿಕೆ ವ್ಯಕ್ತ ಪಡಿಸಿದರು.
ಹಿರಿಯ ನ್ಯಾಯಾಲಯದ ಶಿರಸ್ತೇದಾರರಾದ ಗಿರೀಶ್ ಎಚ್. ನಿರೂಪಿಸಿ, ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.