ಅಪರಿಮಿತ ಕರ್ತವ್ಯ ಜ್ಞಾನದಿಂದ ಶ್ರೇಷ್ಠತೆ : ಜುಬಿನ್ ಮೊಹಾಪಾತ್ರ ಅಭಿಮತ

bilkoduge
ಕುಕ್ಕೆ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ದಂಪತಿಗಳನ್ನು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಗೌರವಿಸಿದರು. ಎಇಒ ಯೇಸುರಾಜ್, ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಭಿಯಂತ ಉದಯಕುಮಾರ್ ಉಪಸ್ಥಿತರಿದ್ದರು.
Published on

ಸುಬ್ರಹ್ಮಣ್ಯ: ಡಾ.ನಿಂಗಯ್ಯ ಅವರು ತಮ್ಮ ಸುದೀರ್ಘ ಸೇವಾವಧಿಯಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು. ಕರ್ತವ್ಯದ ಬಗೆಗಿನ ಅಪರಿಮಿತ ಜ್ಞಾನ ಅಧಿಕಾರಿಗಳ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿ ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಮತ್ತು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಜುಬಿನ್ ಮೊಹಾಪತ್ರ ಹೇಳಿದರು.

೩೫ ವರ್ಷಗಳ ಸರ್ಕಾರಿ ಸೇವೆಯಿಂದ ಸೇವಾ ನಿವೃತ್ತಿ ಹೊಂದಿದ ಕುಕ್ಕೆ ದೇವಳ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರಿಗೆ ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಆಡಳಿತಾಧಿಕಾರಿಗಳು ಶ್ರೀ ದೇವರ ಬೆಳ್ಳಿ ಫೋಟೋ ನೀಡಿ ಸನ್ಮಾನಿಸಿದರು. ಡಾ.ನಿಂಗಯ್ಯ ಅವರ ಪತ್ನಿ ನಾಗರತ್ನಾ, ಪುತ್ರಿಯರಾದ ನವ್ಯಶ್ರೀ, ನಿಧಿಶ್ರೀ, ಶ್ರೀ ದೇವಳದ ಎಇಒ ಯೇಸುರಾಜ್ ಇದ್ದರು.

ಶ್ರೀ ದೇವಳ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಭಿಯಂತ ಉದಯಕುಮಾರ್, ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್, ಸಿಬ್ಬಂದಿಗಳಾದ ರಾಜಲಕ್ಷ್ಮೀ ಪಿ.ಶೆಟ್ಟಿಗಾರ್, ನಿಂಗಣ್ಣ ಗೌಡ, ಮಹೇಶ್ ಕುಮಾರ್ ಎಸ್.ಶುಭ ಹಾರೈಸಿದರು.

ಸಿಬ್ಬಂದಿ ಪೂರ್ಣಿಮಾ ಮತ್ತು ಅರ್ಪಿತಾ ಪ್ರಾರ್ಥಿಸಿ. ಅಭಿಯಂತ ಉದಯ ಕುಮಾರ್ ಸ್ವಾಗತಿಸಿ, ಯೋಗೀಶ್ ಎಂ.ವಿಟ್ಲ ವಂದಿಸಿ, ಮಹೇಶ್ ಕುಮಾರ್ ಎಸ್.ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net