ಕೋಟ ಗ್ರಾಪಂ ಪಿಡಿಒಗೆ ಬೀಳ್ಕೊಡುಗೆ

kota
Published on

ಕೋಟ; ನಿವೃತ್ತರಾದ ಕೋಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಅವರಿಗೆ ಕೋಟ ಗ್ರಾ.ಪಂ. ಸಿಬ್ಬಂದಿ ವರ್ಗ, ಸ್ಥಳೀಯ ಸಂಸ್ಥೆಗಳ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.

ಕೋಟ ಅಮೃತೇಶ್ವರಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ.ಕುಂದರ್ ಅವರು ಸುರೇಶ್ ಬಂಗೇರ ದಂಪತಿಯನ್ನು ಸನ್ಮಾನಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಾಂಡು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳಾದ ಎಚ್.ವಿ.ಇಬ್ರಾಹಿಂಪುರ, ಮೋಹನ್‌ರಾಜ್, ಡಾ.ಅರುಣ್‌ಕುಮಾರ್ ಶೆಟ್ಟಿ, ಡಾ.ವಿಶ್ವನಾಥ, ಪಂಚಾಯಿತಿ ಸದಸ್ಯ ಅಜಿತ್ ದೇವಾಡಿಗ, ಗ್ರಾಮ ಲೆಕ್ಕಿಗ ಚಲುವರಾಜು ಉಪಸ್ಥಿತರಿದ್ದರು. ಚಂದ್ರ ಪೂಜಾರಿ ಸ್ವಾಗತಿಸಿದರು. ಶೇಖರ್ ಸನ್ಮಾನ ಪತ್ರ ವಾಚಿಸಿದರು. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net