

ಮುಳ್ಳೇರಿಯ: ಕೆಎಸ್ಟಿಐ ಕುಂಬಳೆ ಉಪಜಿಲ್ಲಾ ಸಮಿತಿಯ ಆಶ್ರಯದಲ್ಲಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕರಿಗೆ ಬೀಳ್ಕೊಡುಗೆ ಕೂಟವನ್ನು ಇತ್ತೀಚೆಗೆ ಏರ್ಪಡಿಸಲಾಯಿತು.
ಜತೆಗೆ ಸಂಸ್ಥೆ ಆಯೋಜಿಸಿದ್ದ ಕಲೆ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಬಹುಮಾನಿತರಾದವರಿಗೆ ಮತ್ತು ರಾಜ್ಯ ವನಮಿತ್ರ ಪ್ರಶಸ್ತಿ ವಿಜೇತ ಶಿಕ್ಷಕಿ ಎಂ.ಸಾವಿತ್ರಿ ಅವರನ್ನು ಸನ್ಮಾನಿಸಲಾಯಿತು.
ದೇಲಂಪಾಡಿ ಪಂಚಾಯಿತಿ ಅಧ್ಯಕ್ಷೆ ಎ.ಪಿ.ಉಷಾ ಉದ್ಘಾಟಿಸಿದರು. ಕೆ.ಕೆ.ಮೋಹನನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಎನ್.ಕೆ.ಲಸಿತಾ ಸನ್ಮಾನಿಸಿದರು. ಪ್ರತೀಶ್ ಕೆ.ಜಿ, ವಿಷ್ಣುಪಾಲ್ ಬಿ., ಸದಾನಂದನ್ ಎ.ಕೆ., ರಾಜೇಶ್ ಎಂ., ಅನೀಶ್ರಾಜ್ ಪಾಯಂ, ಪ್ರಕಾಶ್ ಬಿ.ಎಂ., ಕುಂಞ್ಞೆ ಕೃಷ್ಣನ್, ಎನ್.ವಿ.ದೀಪರಾಜ ಗೋಪಾಲ್, ಬಿನ್ನಿ ಐರಟ್ಟಿಲ್ ಮಾತನಾಡಿದರು. ಪಿ.ಕುಂಞಂಬು ಸ್ವಾಗತಿಸಿದರು. ಶಶಿಧರನ್ ಪಿ.ಕೆ.ವಂದಿಸಿದರು.