ಕುಂಬಳೆ ಶಿರಿಯದಲ್ಲಿ ಆಟೋ, ಕಾರು ಡಿಕ್ಕಿ

accident-15
Published on

ಕಾಸರಗೋಡು: ಕುಂಬಳೆ-ತಲಪ್ಪಾಡಿ ರಾಷ್ಟ್ರೀಯ ಹೆದ್ದಾರಿ ಶಿರಿಯ ಮುಟ್ಟಂ ಬಳಿ ಆಟೋರಿಕ್ಷಾ ಮತ್ತು ಕಾರು ಡಿಕ್ಕಿಯಾಗಿ ಎಂಟು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ನಾಲ್ಕು ಮಂದಿಗೆ ಗಂಭೀರ ಗಾಯಗಳುಂಟಾಗಿದೆ. ಅಪಘಾತದಿಂದ ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಆಟೋರಿಕ್ಷಾ ಪ್ರಯಾಣಿಕರಾದ ಶಿರಿಯ ನಿವಾಸಿಗಳಾದ ಶುಹೈಬಾ, ಮಕ್ಕಳಾದ ಜನ್ನ, ಅಯಾನ್, ಸುಹೈಬ್ ಹಾಗೂ ಕಾರಿನಲ್ಲಿದ್ದ ಚೆರ್ವತ್ತೂರು ನಿವಾಸಿಗಳಾದ ವಿಲಾಸಿನಿ, ಉಣ್ಣಿಕೃಷ್ಣನ್, ಸುರೇಶ್‌ಬಾಬು, ಸ್ಮತಿ ಗಾಯಗೊಂಡವರು. ಗಾಯಾಳುಗಳು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕುಂಬಳೆ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net