More

    ನಟ ದರ್ಶನ್​​​​​ ಹುಟ್ಟುಹಬ್ಬಕ್ಕೆ ಟ್ರ್ಯಾಕ್ಟರ್​ ಗಿಫ್ಟ್​ ಕೊಟ್ಟ ಅಭಿಮಾನಿಗಳು

    ಬೆಂಗಳೂರು: ನಟ, ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಫೆಬ್ರವರಿ 16ರಂದು ತಮ್ಮ 47ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದು, ಈ ಹಿನ್ನಲೆಯಲ್ಲಿ ನಟನ ಅಭಿಮಾನಿಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.

    ದರ್ಶನ್​ ಹುಟ್ಟುಹಬ್ಬಕ್ಕೆ ಕಳೆದ ಕೆಲ ತಿಂಗಳಿನಿಂದ ತಯಾರಿ ನಡೆಸಿರುವ ಅಭಿಮಾನಿಗಳು ನೆಚ್ಚಿನ ನಟನ ಜನ್ಮದಿನವನ್ನು ಹಬ್ಬದಂತೆ ಆಚರಿಸಲು ತಯಾರಿ ನಡೆಸಿದ್ದಾರೆ. ಈಗಾಗಲೇ ನಟ ದರ್ಶನ್​ ಮನೆ ಬಳಿ ಅಭಿಮಾನಿಗಳು ಜಮಾಯಿಸಿದ್ದು, ದೂರದ ಊರುಗಳಿಂದ, ರೈತ ಸಂಘದವರು ಸೇರಿದಂತೆ ಹಲವರು ನಟಿನಿಗೆ ಶುಭ ಕೋರಲು ಆಗಮಿಸಿದ್ದಾರೆ.

    Actor Darshan

    ಇದನ್ನೂ ಓದಿ: ರೈತರ ಪ್ರತಿಭಟನೆಯಲ್ಲಿ ಕಾಣಿಸಿಕೊಂಡ ಕುಖ್ಯಾತ ಗ್ಯಾಂಗ್​ಸ್ಟರ್​!

    ಇತ್ತ ದರ್ಶನ್​ ಜನುಮದಿನದ ಪ್ರಯುಕ್ತ ನಟನಿಗೆ ಅಭಿಮಾನಿಗಳು ವಿಶೇಷ ಗಿಫ್ಟ್​ ನೀಡಿದ್ದು, ಎಲ್ಲರ ಗಮನ ಸೆಳೆದಿದೆ. ನಟ ದರ್ಶನ್​ಗೆ ಅಭಿಮಾನಿಗಳು ಟ್ರ್ಯಾಕ್ಟರ್​ ಗಿಫ್ಟ್​ ನೀಡಿದ್ದು, ಎಲ್ಲರ ಗಮನ ಸೆಳೆದಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಡಿಫರೆಂಟ್​ ಆಗಿ ಶುಭ ಕೋರಿದ್ದಾರೆ. ಇನ್ನು ನಟ ದರ್ಶನ್​ ಹಸಿರ ಶಾಲು ಧರಿಸಿ ಟ್ರ್ಯಾಕ್ಟರ್​ ಓಡಿಸುತ್ತಿಉವುದನ್ನು ನೋಡಿದ ಅಭಿಮಾನಿಗಳು ಖುಷಿಯಿಂದ ಘೋಷಣೆಗಳನ್ನು ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ನಟ ದರ್ಶನ್​ ಹುಟ್ಟುಹಬ್ಬದ ಪ್ರಯುಕ್ತ ಅವರ ನಟನೆಯ ಮುಂದಿನ ಚಿತ್ರ ಡವಿಲ್​ ಸಿನಿಮಾದ ಫಸ್ಟ್​ಲುಕ್​ ಫೆಬ್ರವರಿ 15ರಂದು ರಾತ್ರಿ 11:59ಕ್ಕೆ ಬಿಡುಗಡೆಯಾಗಲಿದ್ದು, ಅಭಿಮಾನಿಗಳಿಗೆ ಡಬಲ್​ ಧಮಾಕ ಎಂದು ಹೇಳಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts