ಸ್ಟೈಲಿಶ್​​​​ ಸ್ಟಾರ್​​ ದರ್ಶನಕ್ಕೆ ಬೈಸಿಕಲ್​ನಲ್ಲಿ ಬಂದ ಅಭಿಮಾನಿ; ಯುಪಿ ಫ್ಯಾನ್​​ಗೆ Allu Arjun ಹೇಳಿದ್ದೇನು?

Untitled-design-52
Published on

ಹೈದರಾಬಾದ್​​: ಸಿನಿಮಾ ತಾರೆಯರ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್‌ಗಳಿಗಾಗಿ ಎಷ್ಟು ದೂರ ಹೋಗಬಹುದು ಮತ್ತು ಏನನ್ನಾದರೂ ಮಾಡುತ್ತಾರೆ ಎಂಬುದನ್ನು ನೋಡಿರುತ್ತೇವೆ ಹಾಗೂ ಕೇಳಿದ್ದೇವೆ. ಸೌತ್​​ನ ಸ್ಟೈಲಿಶ್​​​​​ ಸ್ಟಾರ್​​ ಅಲ್ಲು ಅರ್ಜುನ್(Allu Arjun)​​ ಅವರ ಕುರಿತು ಹೇಳುವ ಅವಶ್ಯಕತೆಯೇ ಇಲ್ಲ. ಈ ನಟ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲು ಅರ್ಜುನ್​ ಅವರನ್ನು ನೋಡಲೆಂದು ಅಭಿಮಾನಿಯೊಬ್ಬ ಉತ್ತರ ಪ್ರದೇಶದಿಂದ ಹೈದರಾಬಾದ್‌ಗೆ ಸೈಕಲ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ವಿಷಯ ಕೇಳಿ ಭೇಟಿಗೆ ಸಮ್ಮತಿಸಿದ ನಟ ಅಭಿಮಾನಿಯ ಕ್ರೇಜ್ ನೋಡಿ ಶಾಕ್​ ಆಗಿದ್ದಾರೆ.

ಉತ್ತರ ಪ್ರದೇಶದಿಂದ ಬೈಸಿಕಲ್‌ನಲ್ಲಿ ಬಂದ ತಮ್ಮ ಅಭಿಮಾನಿಯನ್ನು ಅಲ್ಲು ಅರ್ಜುನ್ ಭೇಟಿಯಾಗಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಅಭಿಮಾನಿಯ ಯೋಗಕ್ಷೇಮ ವಿಚಾರಿಸುತ್ತಿರುವ ಆತ ಅಲ್ಲು ಅರ್ಜುನ್ ಪಾದಗಳನ್ನು ಸ್ಪರ್ಶಿಸಲು ಬಾಗುತ್ತಾನೆ. ಆತನ ಜತೆಗೆ ಅಲ್ಲು ಅರ್ಜುನ್​​ ಕೂಡ ಬಾಗಿ ಆತನನ್ನು ಮೇಲುತ್ತಾರೆ. ಬಳಿಕ ಆತನನ್ನು ಹೇಗೆ ಬಂದುದ್ದಾಗಿ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಅಭಿಮಾನಿ ನಾನು ಉತ್ತರ ಪ್ರದೇಶದ ಅಲಿಗಢದಿಂದ ಸೈಕಲ್‌ನಲ್ಲಿ ಬಂದಿದ್ದೇನೆ ಎಂದು ಹೇಳುತ್ತಾನೆ. ಸುಮಾರು 1600 ಕಿಲೋಮೀಟರ್ ದೂರದಲ್ಲಿದೆ. ಇದನ್ನು ಕೇಳಿದ ಅಲ್ಲು ಅರ್ಜುನ್​ ಆಶ್ಚರ್ಯಗೊಳ್ಳುವುದನ್ನು ನೋಡಬಹುದು.

ಅಲ್ಲು ಅರ್ಜುನ್​​ ಫ್ಯಾನ್‌ನ ಕೈ ಹಿಡಿದು ಅಚ್ಚರಿಯಿಂದ ನೋಡುತ್ತಲೇ ಅಭಿಮಾನಿ ಹೇಳುವುದನ್ನು ಆಲಿಸುತ್ತಾರೆ. ಬಳಿಕ ತಮ್ಮ ತಂಡಕ್ಕೆ ವಿಮಾನ ಅಥವಾ ರೈಲಿನ ಟಿಕೆಟ್​​ ಕಾಯ್ದಿರಿಸಿ ಆತನನ್ನು ಕಳುಹಿಸುವಂತೆ ಹೇಳುತ್ತಾರೆ. ಅಭಿಮಾನಿ ಅದಕ್ಕೆ ಒಪ್ಪದಿದ್ದಾಗ ತಮ್ಮ ತಂಡಕ್ಕೆ ಕ್ಷೇಮವಾಗಿ ಇತನನ್ನು ಬಸ್​​​ನಲ್ಲಿ ಕಳುಹಿಸುವಂತೆ ಹೇಳುತ್ತಾರೆ. ಅಭಿಮಾನಿಗೆ ಬೈಸಿಕಲ್​ನಲ್ಲಿ ಅಲಿಗಢಕ್ಕೆ ಹಿಂತಿರುಗದಂತೆ ವಿನಂತಿಸುತ್ತಾರೆ.

ನಿಮ್ಮನ್ನು ಭೇಟಿ ಮಾಡಿದ್ದೆ ಸಾಕು ಎಂದು ಅಭಿಮಾನಿ ಹೇಳಿದಾಗ ಅಲ್ಲು ಅರ್ಜುನ್ ಫೋಟೋಗಳಿಗೆ ಪೋಸ್ ನೀಡಿ, ಗಿಡವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲ ಪುಷ್ಪ 2 ಚಿತ್ರದ ಪ್ರಚಾರಕ್ಕಾಗಿ ಉತ್ತರಪ್ರದೇಶಕ್ಕೆ ಬಂದಾಗಿ ಅಭಿಮಾನಿಗಳನ್ನು ಭೇಟಿ ಮಾಡುವುದಾಗಿ ಭರವಸೆ ನೀಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಅಲ್ಲು ಅರ್ಜುನ್ ಅವರ ಮುಂಬರುವ ಚಿತ್ರ 'ಪುಷ್ಪ: ದಿ ರೂಲ್' ಡಿಸೆಂಬರ್ 6ರಂದು ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ, ಅನಸೂಯಾ ಭಾರದ್ವಾಜ್, ಪ್ರಿಯಾಮಣಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net