ಶಿರಸಿ ತಾಲೂಕಿನಲ್ಲಿ ಭೂಕುಸಿತ! ಅಪಾರ ಪ್ರಮಾಣದ ಹಾನಿ

bhoomi kusita
Published on

ಉತ್ತರ ಕನ್ನಡ: ಶಿರಸಿ ತಾಲೂಕಿನ ಮತ್ತಿಘಟ್ಟ ಕೆಳಗಿನ ಕೇರಿ ಗ್ರಾಮದಲ್ಲಿ ಮಂಗಳವಾರ ಭೂಕುಸಿತ ಸಂಭವಿಸಿದ್ದು, ಅಡಕೆ ತೋಟ ನಾಶವಾಗಿದೆ. ಮಧುಸೂದನ್ ಹೆಗಡೆ ಎಂಬುವವರಿಗೆ ಸೇರಿದ ಒಂದು ಎಕರೆ ಅಡಿಕೆ ತೋಟ ಭೂ ಕುಸಿತದಿಂದ ಸಂಪೂರ್ಣ ನಾಶವಾಗಿದೆ. ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಭೂಮಿ ಬಿರುಕು ಬಿಟ್ಟಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net