10, 12 ನೇ ತರಗತಿ ಪರೀಕ್ಷಾ ಫಲಿತಾಂಶ ದಿನಾಂಕ ಕುರಿತ ವದಂತಿ ನಂಬಬೇಡಿ ಎಂದ ಸಿಬಿಎಸ್​ಇ

CBSE JPG 1
Published on

ನವದೆಹಲಿ: ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್​​ಇ) 2020ರ 10 ಮತ್ತು 12 ನೇ ತರಗತಿಯ ಪರೀಕ್ಷಾ ಫಲಿತಾಂಶ ಪ್ರಕಟಣೆಯ ದಿನಾಂಕದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿ ನಂಬಬೇಡಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದೆ.

10 ಮತ್ತು 12 ನೇ ತರಗತಿ ಫಲಿತಾಂಶದ ದಿನಾಂಕನ್ನು ಇನ್ನೂ ಘೋಷಿಸಿಲ್ಲ. ಆದರೆ 12 ನೇ ತರಗತಿ ಫಲಿತಾಂಶ ಜುಲೈ 11 ರಂದು ಮತ್ತು 10 ನೇ ತರಗತಿ ಜುಲೈ 13 ರಂದು ಬಿಡುಗಡೆಯಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದು,ಇದು ಸುಳ್ಳು ಸುದ್ದಿ ಆಗಿದೆ.

ಮಂಡಳಿಯು ಇನ್ನೂ ಯಾವುದೇ ದಿನಾಂಕವನ್ನು ಘೋಷಿಸಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಗಮನಿಸಬೇಕು. ದಿನಾಂಕಗಳನ್ನು ನಿರ್ಧರಿಸಿದ ನಂತರ, ಅಧಿಕೃತ ವೆಬ್​​ಸೈಟ್​ಲ್ಲಿ ಘೋಷಿಸಲಾಗುತ್ತದೆ.

ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್ cbse.nic.in ನಲ್ಲಿ ಪರಿಶೀಲನೆ ಮಾಡಲು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net