ನಕಲಿ ವೈದ್ಯರ ಹುಚ್ಚಾಟಕ್ಕೆ 5 ವರ್ಷದ ಮಗು ಬಲಿ! ಇಬ್ಬರ ಬಂಧನ | Fake Doctors

ವಿಜಯವಾಣಿ - 2025-05-27T163529.911
Published on

Fake Doctors: ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಂತೆ ನಟಿಸಿ, ಐದು ವರ್ಷದ ಬಾಲಕನಿಗೆ ಶಸ್ತ್ರಚಿಕಿತ್ಸೆ ನಡೆಸಿದ ಅಣ್ಣ-ತಮ್ಮ, ಸರ್ಜರಿ ಹೆಸರಿನಡಿ ಮಗುವಿನ ಪ್ರಾಣ ಕಸಿದ ಘಟನೆ ಉತ್ತರ ಪ್ರದೇಶದ ಚಾರ್ವಾ ಮನುರಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ವರದಿಯಾಗಿದೆ.

ಸಿರಿಯಾವಾ ಕಲಾ ಗ್ರಾಮದ ಸ್ಥಳೀಯ ರಾಮ್ ಅಸ್ರೆ ಎಂಬುವವರು ಅನ್ಮೋಲ್ ಆಸ್ಪತ್ರೆಯಲ್ಲಿ ತಮ್ಮ ಮಗುವಿನ ಉಸಿರು ನಿಂತು ಹೋಗಿದೆ. ಇದಕ್ಕೆ ಕಾರಣ ಅವರಿಬ್ಬರು (ನಕಲಿ ವೈದ್ಯರು) ಎಂದು ಆರೋಪಿಸಿ, ಆಸ್ಪತ್ರೆಯ ಹಿರಿಯ ವೈದ್ಯರ ಅನುಪಸ್ಥಿತಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಮ್ಮ ಮಗ ದಿವ್ಯಾಂಶು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ ಬೆನ್ನಲ್ಲೇ ಬಿಎನ್‌ಎಸ್‌ನ ಸೆಕ್ಷನ್ 105 (ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆಗೆ ಶಿಕ್ಷೆ) ಅಡಿಯಲ್ಲಿ ಚಾರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ಅಪ್ರಾಪ್ತ ಬಾಲಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಶಂಬಿ ಜಿಲ್ಲೆಯ ಸ್ಥಳೀಯರಾದ ವಿಕಾಸ್ ಕುಮಾರ್ (26) ಮತ್ತು ವಿಶೇಷ್ ಕುಮಾರ್ನನ್ನು (25) ಪೊಲೀಸರು ಬಂಧಿಸಿದ್ದಾರೆ.

ವೈದ್ಯಕೀಯ ಪದವಿ ಇಲ್ಲದಿದ್ದರೂ ಸಹೋದರರು ತಮ್ಮನ್ನು ತಾವು ವೈದ್ಯರು ಎಂದು ಬಿಂಬಿಸಿ, ಸ್ಥಳೀಯರ ಕಣ್ಣಿಗೆ ಮಣ್ಣೆರಚಿ, ಮಗುವಿನ ಸಾವಿಗೆ ಕಾರಣರಾಗಿದ್ದಾರೆ. ಘಟನೆಯ ಬೆನ್ನಲ್ಲೇ ಖಾಸಗಿ ಆಸ್ಪತ್ರೆಯನ್ನು ಕೌಶಂಬಿಯ ಮುಖ್ಯ ವೈದ್ಯಾಧಿಕಾರಿ ಸೀಲ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net