More

  ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್​​​​​​ನಿಂದ ಶಾರುಖ್​​​​​​​​​​​​​ವರೆಗೆ… ಜಾಮ್‌ನಗರಕ್ಕೆ ಬಂದಿಳಿದ ಗಣ್ಯರು; ವಿಡಿಯೋಗಳಲ್ಲಿ ನೋಡಿ

  ನವದೆಹಲಿ: ಅಂಬಾನಿ ಕುಟುಂಬದ ಕಿರಿಯ ಪುತ್ರ, ಕೈಗಾರಿಕೋದ್ಯಮಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭಗೊಂಡಿವೆ. ವಿವಾಹ ಪೂರ್ವ ಕಾರ್ಯಕ್ರಮಕ್ಕೂ ಮುನ್ನ ಅಂಬಾನಿ ಕುಟುಂಬ ಅನ್ನ ಸೇವೆಯ ಸಂಪ್ರದಾಯವನ್ನು ಪಾಲಿಸಿತ್ತು.

  ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಭಾರತ ಮತ್ತು ವಿದೇಶದ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಸಲ್ಮಾನ್ ಖಾನ್‌ನಿಂದ ಹಾಲಿವುಡ್ ಗಾಯಕಿ ರಿಹಾನ್ನಾವರೆಗೆ ಒಬ್ಬೊಬ್ಬರಾಗಿ ಅತಿಥಿಗಳು ಜಾಮ್‌ನಗರ ತಲುಪಿದ್ದಾರೆ. ಹಾಗಾದರೆ ಯಾರೆಲ್ಲಾ ಅತಿಥಿಗಳು ಆಗಮಿಸಿದ್ದಾರೆ ಇಲ್ಲಿದೆ ನೋಡಿ ವಿಡಿಯೋ…

  ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ತಮ್ಮ ಪತ್ನಿ ಪ್ರಿಸ್ಸೆಲಿಯಾ ಚಾನ್ ಅವರೊಂದಿಗೆ ಜಾಮ್‌ನಗರ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ.

  ಗುರುವಾರ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಅವರೊಂದಿಗೆ ಜಾಮ್‌ನಗರ ತಲುಪಿದ್ದಾರೆ.

  ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರಾಣಿ ಮುಖರ್ಜಿ ಈ ಸಮಯದಲ್ಲಿ ಪಾಪರಾಜಿಗಳಿಗೆ ಸಖತ್​​​ ಪೋಸ್ ನೀಡಿದರು.

  ಚಲನಚಿತ್ರ ನಿರ್ಮಾಪಕರಾದ ಬೋನಿ ಕಪೂರ್ ಮತ್ತು ಅಯಾನ್ ಮುಖರ್ಜಿ ಕೂಡ ಜಾಮ್‌ನಗರದಲ್ಲಿ ಕಾಣಿಸಿಕೊಂಡರು.

  ಬಾಲಿವುಡ್ ಕಿಂಗ್ ಶಾರುಖ್ ಖಾನ್ ತಮ್ಮ ಕುಟುಂಬದೊಂದಿಗೆ ಅನಂತ್ ಮತ್ತು ರಾಧಿಕಾ ಅವರ ವಿವಾಹಪೂರ್ವ ಸಮಾರಂಭದಲ್ಲಿ ಭಾಗವಹಿಸಿದ್ದರು.

  ಜವಾನ್‌ನ ಅಟ್ಲೀ ಕುಮಾರ್ ಕೂಡ ತಮ್ಮ ಪತ್ನಿಯೊಂದಿಗೆ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರು.

  ಆದಿತ್ಯ ಠಾಕ್ರೆ ಅವರು ಅನಂತ್-ರಾಧಿಕಾ ಅವರ ವಿವಾಹಪೂರ್ವ ಕಾರ್ಯಕ್ರಮಕ್ಕಾಗಿ ತಮ್ಮ ಪತ್ನಿಯೊಂದಿಗೆ ಜಾಮ್‌ನಗರ ತಲುಪಿದರು.

  ಹಾಲಿವುಡ್ ಗಾಯಕಿ ರಿಹಾನ್ನಾ ಕೂಡ ಅನಂತ್-ರಾಧಿಕಾ ಅವರ ವಿವಾಹಪೂರ್ವ ಕಾರ್ಯಕ್ರಮಕ್ಕಾಗಿ ಜಾಮ್‌ನಗರ ತಲುಪಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts