ಪಡುಬಿದ್ರಿ: ವಿದ್ಯಾರ್ಥಿಗಳು ಪಾಠ ಪ್ರವಚನಗಳಿಗೆ ಕೊಡುವಷ್ಟೇ ಮಹತ್ವವನ್ನು ಸಂಗೀತ ಸಾಹಿತ್ಯ ಕಲೆ ಕ್ರೀಡೆಗಳಂತಹ ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು. ವಿದ್ಯಾರ್ಥಿಗಳಿಗೆ ವಿಶ್ವವೇ ವಿದ್ಯಾಲಯವಾಗಬೇಕು. ಹೊರ ಜಗತ್ತಿನ ಅನುಭವ ವಿದ್ಯಾರ್ಥಿಗಳ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಭಾಗವತ ಪ್ರಸನ್ನ ಭಟ್ ಬಾಳ್ಕಲ್ ಹೇಳಿದರು.
ಪಡುಬಿದ್ರಿ ಶ್ರೀ ಬ್ರಹ್ಮವಿದ್ಯಾ ಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪಡುಬಿದ್ರಿ ಗಣಪತಿ ಪ್ರೌಢಶಾಲೆ ಸಂಯುಕ್ತವಾಗಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಿವಿಧ ಸಂ ಮತ್ತು ಯಕ್ಷಕಥಾ ವೈಭವ ಉದ್ಘಾಟಿಸಿ ವಾತನಾಡಿದರು.
ಕಲಾ, ಭಾಷಾ, ಯಕ್ಷ ಶಿಕ್ಷಣ, ವಿಜ್ಞಾನ, ಕ್ರೀಡಾ ಸಂಗಳನ್ನು ಉದ್ಘಾಟಿಸಲಾಯಿತು. ಪ್ರಸನ್ನ ಭಟ್ ಬಾಳ್ಕಲ್ ಮತ್ತು ಎನ್.ಜಿ.ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಅನುರಾಧಾ ಪಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಂಸ್ಕೃತ ವಿದ್ವಾಂಸ ಎಲ್.ಎಸ್.ಭಟ್, ಮದ್ದಳೆ ವಾದಕ ಎನ್.ಜಿ.ಹೆಗಡೆ, ವಿದ್ಯಾರ್ಥಿ ಸಂದ ಪ್ರತಿನಿಧಿಗಳು, ಉಭಯ ಸಂಸ್ಥೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು. ರಾವೇಂದ್ರ ರಾವ್ ಸ್ವಾಗತಿಸಿದರು. ಅಶೋಕ್ ಕೆ. ವಂದಿಸಿದರು. ಶಿಕ್ಷಕಿ ರಕ್ಷಿತಾ ನಿರೂಪಿಸಿದರು.