ಕುಂದಾಪುರ: ಕುಂದಾಪುರ ತಾಲೂಕು ನಿವೃತ್ತ ನೌಕರರ ಸಂಘದ ಮಾಸಿಕ ಸಭೆ ಶ್ರೀ ಕುಂದೇಶ್ವರ ದೇವಸ್ಥಾನದ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ಸಂಘದ ಅಧ್ಯಕ್ಷ ವಸಂತ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸದಸ್ಯತ್ವ ಸ್ವೀಕರಿಸಿದ ನಿವೃತ್ತ ಪ್ರೌಢಶಾಲಾ ಮುಖ್ಯಶಿಕ್ಷಕ ಮಹಾಬಲ ಶೆಟ್ಟಿಗಾರ್ ವಕ್ವಾಡಿ ಮತ್ತು ನಿವೃತ್ತ ಪ್ರಾಥಮಿಕ ಶಾಲೆ ಶಿಕ್ಷಕ ಬಾಬು ಗೌಡ ಇಡೂರು ಕುಂಜ್ಞಾಡಿ ಅವರನ್ನು ಬರಮಾಡಿಕೊಳ್ಳಲಾಯಿತು. ಎ.ಮುತ್ತಯ್ಯ ಶೆಟ್ಟಿ, ಸಿ.ಎಚ್.ಜಗನ್ನಾಥ ಶೆಟ್ಟಿ, ಅಶೋಕ್ ಜಿ.ವರ್ಣೇಕರ್, ಶಂಕರ ಬಿಲ್ಲವ, ರಮಾನಂದ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಬಿ.ವಿಜಯಕರ ಶೆಟ್ಟಿ ಹಾಗೂ ಪ್ರೇಮಾನಂದ ಅವರನ್ನು ಅಭಿನಂದಿಸಲಾಯಿತು. ಶಂಕರ ಬಿಲ್ಲವ ಕಟ್‌ಬೇಲ್ತೂರು ಪ್ರಾರ್ಥಿಸಿದರು. ಕಾರ್ಯದರ್ಶಿ ರಘುವೀರ ಕೆ.ವರದಿ ವಾಚಿಸಿದರು. ಖಜಾಂಚಿ ಎಚ್.ಸುಬ್ರಾಯ ಗಾಣಿಗ ಲೆಕ್ಕ ಪತ್ರ ಮಂಡಿಸಿದರು. ವಿನಯಾ ಶೆಣೈ ವಂದಿಸಿದರು.