More

    ‘ಬಾಹುಬಲಿ 2’ ಕಥೆಯೊಳಗೆ ನಟ ನಿತಿನ್​?; ‘ಎಕ್ಸ್ಟ್ರಾ ಆರ್ಡಿನರಿ ಮ್ಯಾನ್’ ಟೀಸರ್​ನಲ್ಲಿ ಮಿಂಚಿದ ಶ್ರೀಲೀಲಾ

    ಆಂಧ್ರಪ್ರದೇಶ: ಟಾಲಿವುಡ್​ನ ಯುವ ಮತ್ತು ಪ್ರತಿಭಾವಂತ ನಟ ನಿತಿನ್ ಮತ್ತು ನಿರ್ದೇಶಕ, ಬರಹಗಾರ ವಕ್ಕಂತಂ ವಂಶಿ ಕಾಂಬಿನೇಷ್​ನಲ್ಲಿ ತಯಾರಾದ ‘ಎಕ್ಸ್‌ಟ್ರಾ ಆರ್ಡಿನರಿ ಮ್ಯಾನ್’ ಚಿತ್ರದ ಟೀಸರ್​ ಇಂದು ಬಿಡುಗಡೆಯಾಗಿದ್ದು, ನಿತಿನ್​-ಶ್ರೀಲೀಲಾ ಜೋಡಿ ಇದೀಗ ನೋಡುಗರ ಗಮನವನ್ನು ಸೆಳೆದಿದೆ.

    ಇದನ್ನೂ ಓದಿ: ಇನ್ನೊಂದೆರಡು ವರ್ಷ ಅತಿಯಾಗಿ ಕೆಲಸ ಮಾಡಬೇಡಿ: ಆರೋಗ್ಯ ಸಚಿವರ ಸಲಹೆ!

    ಇಂದು ಸಿನಿಮಾದ ಟೀಸರ್ ಅನಾವರಣಗೊಂಡಿದ್ದು, ನಿತಿನ್ ಚಿತ್ರರಂಗದಲ್ಲಿ ಜೂನಿಯರ್ ಆರ್ಟಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿತಿನ್​ಗೆ ನಾಯಕಿಯಾಗಿ ಅಭಿನಯಿಸಿರುವ ಸ್ಯಾಂಡಲ್​ವುಡ್​ ಬೆಡಗಿ ಶ್ರೀಲೀಲಾ ಟೀಸರ್​ನಲ್ಲಿ ಮುದ್ದು ಹುಡುಗಿಯ ಪಾತ್ರದಲ್ಲಿ ಮಿಂಚಿದ್ದಾರೆ.

    ಟೀಸರ್​ನಲ್ಲಿ ಒಂದಷ್ಟು ಕಡೆ ಮಾಸ್​ ಲುಕ್​ನಲ್ಲಿ ಕಾಣಿಸಿಕೊಳ್ಳುವ ನಿತಿನ್​, ರೊಮ್ಯಾಂಟಿಕ್ ಹೀರೋ​ ಆಗಿ ಕೂಡ ನಟಿಸಿರುವುದು ಕಂಡುಬಂದಿದೆ. ಟೀಸರ್​ನ ಮಧ್ಯೆ ‘ಬಾಹುಬಲಿ 2’ ಚಿತ್ರದ ಒಂದು ಭಾಗದಲ್ಲಿ ನಿತಿನ್​ ಇರುವ ದೃಶ್ಯವೊಂದು ಸಿಕ್ಕಾಪಟ್ಟೆ ಗೊಂದಲ ಮೂಡಿಸುವಂತಿದೆ. ಒಟ್ಟಾರೆ ಟಾಲಿವುಡ್​ ಅಂಗಳದಲ್ಲಿ ಸಖತ್​ ಬ್ಯುಸಿಯಿರುವ ಶ್ರೀಲೀಲಾ ಇದೀಗ ತಮ್ಮ ಮತ್ತೊಂದು ಸಿನಿಮಾದ ಮುಖೇನ ಚಿತ್ರ ಪ್ರೇಮಿಗಳನ್ನು ಮನರಂಜಿಸಲು ಸಜ್ಜಾಗಿದ್ದಾರೆ.

    ಇದನ್ನೂ ಓದಿ:  ರೈತರ ಹಿತ ಕಾಯಲು ರಾಜ್ಯ ಸರ್ಕಾರ ವಿಫಲ:ಸರ್ಕಾರದ ವಿರುದ್ಧ ಎಚ್ ಡಿ ರೇವಣ್ಣ ಆಕ್ರೋಶ

    ಸುಧಾಕರ್ ರೆಡ್ಡಿ ಹಾಗೂ ನಿಕಿತಾ ರೆಡ್ಡಿ, ಶ್ರೇಷ್ಠ್ ಮೂವೀಸ್ ಮತ್ತು ಆದಿತ್ಯ ಮೂವೀಸ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದ್ದು, ಹ್ಯಾರಿಸ್ ಜಯರಾಜ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ನಿತಿನ್, ಶ್ರೀಲೀಲಾ, ಪವಿತ್ರ ಲೋಕೇಶ್, ರಾವ್​ ರಮೇಶ್, ಬ್ರಹ್ಮಾಜೀ, ಹರ್ಷವರ್ಧನ್​ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

    BBKS10: ಕಡೆಗೂ ಬಿಗ್‌ಬಾಸ್ ಮನೆಗೆ ಹಿಂತಿರುಗಿದ ವರ್ತೂರ್ ಸಂತೋಷ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts