BBKS10: ಕಡೆಗೂ ಬಿಗ್‌ಬಾಸ್ ಮನೆಗೆ ಹಿಂತಿರುಗಿದ ವರ್ತೂರ್ ಸಂತೋಷ್‌!

Untitled design - 2023-10-30T172829.602
Published on

ಬೆಂಗಳೂರು: ಭಾನುವಾರ ನಡೆದ ಸೂಪರ್​ ಸಂಡೆ ವಿತ್​ ಸುದೀಪ್​ ಸಂಚಿಕೆಯಲ್ಲಿ ಮಾತನಾಡಿದ ಸುದೀಪ್​, “ನಾನು ಯಾವ ಗಳಿಗೆಯಲ್ಲಿ ಸಂತೋಷ್​ ಅವರನ್ನು ವಾರ್ತೆ ಅಂದ್ನೋ ವಾರ್ತೆ ಆಗೋಗಿದ್ದಾರೆ ಅವರು, ಈಗ ಅವರಿಗೆ ಜಾಮೀನು ಸಿಕ್ಕಿರೋದ್ರಿಂದ ಬಿಗ್​ ಬಾಸ್​ ಮನೆಗೆ ವಾಪಸ್ ಮರಳಿ​ ಬರ್ತಾರಾ, ಇಲ್ವಾ? ಬಂದ್ರೇನು, ಬರದ್ದಿದ್ರೇನು? ಬರೋದ್ದಿದ್ರೆ ಯಾವಾಗ? ಇದನ್ನು ಬಿಗ್​ ಬಾಸ್​ ನಿಮಗೆ ಮಾತಿನಲ್ಲಿ ತಲುಪಿಸುತ್ತಾರೆ. ಇದನ್ನು ನೋಡೋದಕ್ಕೆ ಕಾಯುತ್ತೀರಿ” ಎಂದು ಸುದೀಪ್​ ಹೇಳಿದ್ದರು.

ಸುದೀಪ್​ ಅವರು ಹೇಳಿ ಒಂದು ದಿನದ ಬಳಿಕ ಬಿಗ್​ ಬಾಸ್​ ಮನೆಯಲ್ಲಿ ಇದೀಗ ವರ್ತೂರ್​ ಸಂತೋಷ್​ ದಿಢೀರ್​ ಎಂಟ್ರಿ ಕೊಟ್ಟಿರುವುದು ಸ್ಪರ್ಧಿಗಳಲ್ಲಿ ಮಾತ್ರವಲ್ಲ ವೀಕ್ಷಕರಲ್ಲೂ ಭಾರೀ ಅಚ್ಚರಿ ಮೂಡಿಸಿದೆ.

ಬಿಗ್‌ಬಾಸ್ ಮನೆಯಲ್ಲಿ ಈಗ ವರ್ತೂರ್ ಸಂತೋಷ್‌! ಕೆಲದಿನಗಳ ಹಿಂದೆ ಅನಿರೀಕ್ಷಿತವಾಗಿ ಮನೆಯೊಳಗಿನಿಂದ ಎಕ್ಸಿಟ್ ಆಗಿದ್ದ ಸಂತೋಷ್ ಇದೀಗ ಮತ್ತೆ ಬಿಗ್ ಬಾಸ್​ಗೆ ಸರ್​ಪ್ರೈಸ್​ ರೀತಿಯಲ್ಲಿ ಕೊಟ್ಟ ಎಂಟ್ರಿಗೆ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net