

ಕೋಟ: ಉತ್ತಮ ಆಹಾರ ಮತ್ತು ವ್ಯಾಯಾಮದಿಂದ ನಮ್ಮ ಆರೋಗ್ಯ ನಾವೇ ಕಾಪಾಡಿಕೊಳ್ಳಬೇಕು. ನಿರಂತರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಆರೋಗ್ಯ ಅವಘಡಗಳಿಂದ ಪಾರಾಗಬಹುದು ಎಂದು ಸೋಮೇಶ್ವರ ಆಯುರ್ವೇದ ಚಿಕಿತ್ಸಾಲಯದ ಡಾ.ರಶ್ಮಿ ಮುರಳೀಧರ್ ಹೇಳಿದರು.
ಕೆದೂರಿನ ಉಳ್ತೂರು ಕೋಟಿ ಪೂಜಾರಿ ಮನೆಯಂಗಳದಿ ಆನ್ಸ್ ಕ್ಲಬ್ ಕೊಟ ಸಿಟಿ ಹಾಗೂ ರೋಟರಿ ಕ್ಲಬ್ ಕೋಟ ಸಿಟಿ ಸಹಯೋಗದಲ್ಲಿ ಬೆಳದಿಂಗಳ ಊಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೊಲೀಸ್ ಸಿಬ್ಬಂದಿ ಶಿವಾನಂದ ನಾಯರಿ, ಸ್ಥಳೀಯ ವಿಷ್ಣುಮೂರ್ತಿ ಉರಾಳ ಅವರನ್ನು ಸನ್ಮಾನಿಸಲಾಯಿತು. ನಿಯೋಜಿತ ಗವರ್ನರ್ ಶ್ಯಾಮಸುಂದರ ನಾಯರಿ ಅವರಿಗೆ ಗೌರವಾರ್ಪಣೆ ನಡೆಯಿತು. ರೋಟರಿ ಪ್ರಮುಖರಾದ ರೇವತಿ ಶ್ಯಾಮಸುಂದರ್, ನಿತ್ಯಾನಂದ ನಾಯರಿ. ರೋಟರಿ ಕಾರ್ಯದರ್ಶಿ ಪ್ರಕಾಶ್ ಪೂಜಾರಿ, ಉಳ್ತೂರು ಕೋಟಿ ಪೂಜಾರಿ, ಡಾ.ಗಣೇಶ್ ಯು. ಉಪಸ್ಥಿತರಿದ್ದರು. ಚಂದ್ರಶೇಖರ್ ಮೆಂಡನ್ ಪ್ರಸ್ತಾವನೆಗೈದರು. ಜ್ಯೋತಿ ನಿತ್ಯಾನಂದ ಸ್ವಾಗತಿಸಿದರು. ಶಶಿಕಲಾ ಗಣೇಶ್ ವಂದಿಸಿದರು. ಆಶಾ ಭಾಸ್ಕರ್ ನಿರೂಪಿಸಿದರು. ಮಮತಾ ಕೃಷ್ಣ ಸಹಕರಿಸಿದರು.