ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ ಚಿಣ್ಣರ ಪ್ರಶಸ್ತಿ ಪ್ರದಾನ

Mbd_Award
Published on

ಮೂಡುಬಿದಿರೆ: ಮಕ್ಕಳ ಮನಸ್ಸು ಸೂಕ್ಷ್ಮವಾದದ್ದು, ಎಳೆಯ ವಯಸ್ಸಿನಲ್ಲಿ ಮಕ್ಕಳ ಬೆಳವಣಿಗೆಗೆ ಬೇಕಾದ ಎಲ್ಲ ಚೌಕಟ್ಟನ್ನು ರೂಪಿಸುವ ಜವಾಬ್ದಾರಿ ಪ್ರತಿಯೊಬ್ಬ ಪೋಷಕರದ್ದು ಎಂದು ಮಕ್ಕಳ ತಜ್ಞ ಡಾ.ಟಿ.ವಸಂತ್ ಹೇಳಿದರು.

ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯ ಯುಕೆಜಿ ತರಗತಿ ವಿದ್ಯಾರ್ಥಿಗಳಿಗೆ ಚಿಣ್ಣರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಎಕ್ಸಲೆಂಟ್ ಸಂಸ್ಥೆ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಮಕ್ಕಳಲ್ಲಿ ಶಿಸ್ತು, ಸಂಯಮ, ಗೌರವ, ಭಕ್ತಿಯ ಮನೋಭಾವ ಬೆಳೆಸುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯ. ಎಳೆಯ ವಯಸ್ಸಿನ ಮಕ್ಕಳು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕಾದರೆ ಮಗು ಬೆಳೆಯುವ ಸುತ್ತಮುತ್ತಲಿನ ಪರಿಸರ ಉತ್ತಮವಾಗಿರಬೇಕು ಎಂದರು.

ಯುಕೆಜಿ ಪುಟಾಣಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಲೆ ಶೈಕ್ಷಣಿಕ ನಿರ್ದೇಶಕ ಬಿ.ಪುಷ್ಪರಾಜ, ಆಡಳಿತ ನಿರ್ದೇಶಕ ಬಿ.ಪಿ.ಸಂಪತ್ ಕುಮಾರ್, ಪ್ರಾಂಶುಪಾಲ ಸುರೇಶ್, ಶೈಕ್ಷಣಿಕ ಸಂಯೋಜಕ ಪ್ರಸಾದ್ ಉಪಸ್ಥಿತರಿದ್ದರು.

ಅತುಲಿತ್ ಗ್ಯಾನ್ ಸ್ವಾಗತಿಸಿದರು. ಆರಲ್ ಲೋಬೊ ವಂದಿಸಿದರು. ಯುಕೆಜಿ ವಿದ್ಯಾರ್ಥಿನಿ ಶ್ರುತಿಕಾ ಕಾಮತ್ ಹಾಗೂ ಅಮೂಲ್ಯ ನಿರೂಪಿಸಿದರು. ರಕ್ಷಿತ್ ಕಾಮತ್ ಅನಿಸಿಕೆ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net